alex Certify ʼಯಶಸ್ಸುʼ ಬೇಕೆಂದರೆ ಈ ಬಗ್ಗೆ ಗಮನ ಕೊಡುವುದು ತುಂಬಾ ಮುಖ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಯಶಸ್ಸುʼ ಬೇಕೆಂದರೆ ಈ ಬಗ್ಗೆ ಗಮನ ಕೊಡುವುದು ತುಂಬಾ ಮುಖ್ಯ

ಯಶಸ್ಸು ಎಲ್ಲೆಲ್ಲೂ ಚರ್ಚೆಯಾಗುವ ಪ್ರಮುಖ ವಿಷಯ. ಕಿರಿಯವರಿಂದ ಹಿರಿಯರವರೆಗೂ ಯಾವುದೇ ಕ್ಷೇತ್ರಗಳಿರಲಿ ಯಶಸ್ಸನ್ನು ಗಳಿಸುವುದು ಅವರ ಗುರಿಯಾಗಿರುತ್ತದೆ. ಇದಕ್ಕಾಗಿ ಭಾರೀ ಹೋಂ ವರ್ಕ್, ತಯಾರಿ ಕೂಡ ಮಾಡಿಕೊಳ್ತಾರೆ.

ಜೀವನದಲ್ಲಿ ಯಶಸ್ಸು ಗಳಿಸುವುದು ಮುಖ್ಯವೆಂದು ಭಾವಿಸಿ ಅನೇಕರು ಏನೇನೋ ಸಲಹೆ, ಸೂಚನೆ ಪಡೆದು ಪಾಲಿಸುತ್ತಾರೆ. ನಾನಾ ತಂತ್ರಗಳನ್ನು ಅನುಸರಿಸುತ್ತಾರೆ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ರಿಲ್ಯಾಕ್ಸ್ ಮೂಡ್ ಅನ್ನೇ ಹೆಚ್ಚಾಗಿ ಇಷ್ಟಪಡ್ತಾರೆ. ಆದರೆ, ಯಶಸ್ಸಿಗೆ ಒತ್ತಡ ಕೂಡ ಮುಖ್ಯವಾಗಿದೆ.

ಹೌದು, ಒತ್ತಡ ಮತ್ತು ಸವಾಲುಗಳಿದ್ದಾಗ ಮಾತ್ರ ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಗುರಿ ತಲುಪಲು ಸಾಧ್ಯವಾಗುತ್ತದೆ.

ಒತ್ತಡ ಇಲ್ಲದಿದ್ದರೆ, ಕೆಲಸ ನಿಧಾನವಾಗಿ ಸಾಗುತ್ತದೆ. ಗುರಿ ತಲುಪುವುದು, ಯಶಸ್ಸು ಗಳಿಸುವುದು ನಿಧಾನವಾಗಬಹುದು. ಒತ್ತಡವಿದೆ ಎಂದು ಅಂಜದೇ ಅದನ್ನು ಸಮರ್ಥವಾಗಿ ಎದುರಿಸುವುದನ್ನು ಕಲಿತುಕೊಳ್ಳಿ.

ಮೊದಲಿಗೆ ಒತ್ತಡ ಎದುರಿಸುವುದು ತುಸು ಕಷ್ಟವೆನಿಸಿದರೂ, ನಂತರದಲ್ಲಿ ಅದೇ ನಿಮಗೆ ಖುಷಿ ಕೊಡುತ್ತದೆ.

ಸೋಮಾರಿತನವನ್ನು ದೂರ ಮಾಡುವ ಒತ್ತಡ ನಿಮ್ಮ ಜೀವನದಲ್ಲಿ ಯಶಸ್ಸು ತಂದು ಕೊಡಬಲ್ಲದು. ಒತ್ತಡವಿದೆ ಎಂದು ಬೇಸರಿಸಿಕೊಳ್ಳದೇ ಸಮಾಧಾನದಿಂದ ಎದುರಿಸಿ, ನಿಮಗೆ ವಹಿಸಲಾದ ಒಂದೊಂದೇ ಕೆಲಸವನ್ನು ಪೂರ್ಣಗೊಳಿಸಿ. ಎಲ್ಲದಕ್ಕೂ ಮಾರ್ಗವಿದೆ. ಒತ್ತಡದ ವೇಳೆಯಲ್ಲಿನ ಸ್ವಲ್ಪ ಸಮಯದ ರಿಲ್ಯಾಕ್ಸ್ ನಿಮ್ಮಲ್ಲಿ ಹೊಸ ಉತ್ಸಾಹ ತರಬಲ್ಲದು. ಒತ್ತಡ ಕೂಡ ನಿಮ್ಮ ಯಶಸ್ಸಿನಲ್ಲಿ ಪ್ರಮಖ ಪಾತ್ರವನ್ನು ವಹಿಸಬಲ್ಲದು ಎನ್ನುತ್ತಾರೆ ಬಲ್ಲವರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...