
ದಿನ ಒಂದು ಸೇಬು ಹಣ್ಣು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಲಾಭವಿದೆ. ಅದರಲ್ಲಿ ಗರ್ಭಿಣಿಯರು ಸೇಬು ಹಣ್ಣು ತಿನ್ನುವುದರಿಂದ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ. ಇದರಲ್ಲಿ ನಾರಿನಾಂಶ ಹೆಚ್ಚಿರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. ಗರ್ಭಿಣಿಯರು ಸೇಬು ಹಣ್ಣನ್ನು ಸೇವಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ಎಂದು ತಿಳಿಯೋಣ .
ಸೇಬು ಹಣ್ಣಿನಲ್ಲಿ ಕಬ್ಬಿಣದಾಂಶ, ಕ್ಯಾಲ್ಸಿಯಂ, ಮಗ್ನೇಷಿಯಂ ಝಿಂಕ್ ಹೆಚ್ಚಿದೆ. ಗರ್ಭಿಣಿಯರು ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ವಿಟಮಿನ್ ಸಿ ಇದರಲ್ಲಿ ಹೆಚ್ಚಿದೆ. ದೇಹದವನ್ನು ಸದೃಢವಾಗಿರಿಸುತ್ತದೆ. ಸೇಬು ಸೇವಿಸುವುದರಿಂದ ದೇಹಕ್ಕೆ ಬೇಕಾದ ಶಕ್ತಿ ದೊರಕುತ್ತದೆ.
ಇನ್ನು ಗರ್ಣಿಣಿಯರಿಗೆ ಕಾಡುವ ದೊಡ್ಡ ಸಮಸ್ಯೆ ಎಂದರೆ ರಕ್ತ ಹೀನತೆ. ಸೇಬು ಹಣ್ಣನ್ನು ಸೇವಿಸುವುದರಿಂದ ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ.
ಇದರಲ್ಲಿ ನಾರಿನಾಂಶ ಹೆಚ್ಚಿರುವುದರಿಂದ ಜೀರ್ಣಕ್ರೀಯೆಯನ್ನು ಸರಾಗವಾಗಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಇನ್ನು ಸ್ತನ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಬಾರದಂತೆ ಇದು ತಡೆಯುತ್ತದೆ.
ಸೇಬು ಹಣ್ಣಿನಲ್ಲಿ ಕ್ಯಾಲೋರಿ ಕೂಡ ಹೆಚ್ಚಿರುವುದರಿಂದ ಇದನ್ನು ಸೇವಿಸುವುದರಿಂದ ನಿಮ್ಮ ದೇಹದ ತೂಕ ಕೂಡ ಹೆಚ್ಚಾಗುತ್ತದೆ. ಸೇಬು ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಇದು ಗರ್ಭಿಣಿಯರಿಗೆ ಶೀತ, ಕೆಮ್ಮು, ಹಾಗೂ ಜ್ವರ ಬಾರದಂತೆ ತಡೆಯುವಲ್ಲಿ ಸಹಕಾರಿ.