
ತುಮಕೂರು : ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿದ್ದು ನಿಜ, ಕಾಂಗ್ರೆಸ್ ಪಕ್ಷ ಲೋಡ್ ಆಗಿದ್ದು, ಮುಂದೆ ಪಂಚರ್ ಆಗಲಿದೆ ಎಂದು ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಲೋಡ್ ಆಗಿದೆ. ಮುಂದೆ ಪಂಚರ್ ಆಗುತ್ತೆ. ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಮುಳುಗಿದೆ. ಒಂದು ಕಡೆ ವರ್ಗಾವಣೆ ದಂಧೆ, ಮತ್ತೊಂದು ಕಡೆ ಕಮಿಷನ್ ದಂಧೆಯಲ್ಲಿ ಮುಳುಗಿದೆ ಎಂದು ಹೇಳಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಚೇಂಬರ್ ಗೆ ಹೋಗಿ ಮಾತನಾಡುತ್ತೇನೆ. ಕೇಳಿದ ಎಲ್ಲಾ ಕೆಲಸವನ್ನು ಡಿ.ಕೆ. ಶಿವಕುಮಾರ್ ಮಾಡಿಕೊಡುತ್ತಾರೆ. ಕಾಂಗ್ರೆಸ್ ಗೆ ಹೋಗುವಂತದ್ದು ಏನಿದೆ? ಕಾಂಗ್ರೆಸ್ ನಲ್ಲಿ 136 ಶಾಸಕರಿಂದ ಓವರ್ ಲೋಡ್ ಆಗಿದ್ದು, ಸರ್ಕಾರ ಬಿದ್ದು ಹೋಗಲ್ಲ. ಆದರೆ ಪಂಚರ್ ಆಗಿ ನಿಂತು ಹೋಗಲಿದೆ ಎಂದರು.