ಫ್ರಿಜ್ ಈಗ ಎಲ್ಲರ ಮನೆಯನ್ನೂ ಪ್ರವೇಶ ಮಾಡಿದೆ. ಮಾರುಕಟ್ಟೆಯಿಂದ ತಂದ ತರಕಾರಿಗಳು ನೇರವಾಗಿ ಫ್ರಿಜ್ ಪ್ರವೇಶ ಮಾಡ್ತವೆ. ಫ್ರಿಜ್ ನಲ್ಲಿಟ್ಟ ಎಲ್ಲ ತರಕಾರಿಗಳು ಬಹಳ ದಿನ ತಾಜಾ ಆಗಿರುತ್ವೆ ಎನ್ನುವುದು ಸುಳ್ಳು. ಕೆಲವೊಂದು ತರಕಾರಿಗಳನ್ನು ಫ್ರಿಜ್ ನಲ್ಲಿಡುವುದು ಒಳ್ಳೆಯದಲ್ಲ.
ಟೊಮೊಟೊ ತಂದು ನಾಲ್ಕು ದಿನವಾಗಿಲ್ಲ. ಫ್ರಿಜ್ ನಲ್ಲಿಟ್ಟರೂ ಹಾಳಾಗಿದೆ ಎಂದು ಅನೇಕರು ಹೇಳಿದ್ದನ್ನು ನೀವು ಕೇಳಿರಬಹುದು. ಟೊಮೊಟೊ ಹಣ್ಣಿಗೆ ನೀರು ಹಾಗೂ ಗಾಳಿಯ ಅವಶ್ಯಕತೆ ಇದೆ. ಹಾಗಾಗಿ ಟೊಮೊಟೊ ಹಣ್ಣನ್ನು ಫ್ರಿಜ್ ನಲ್ಲಿಡಬೇಡಿ.
ಫ್ರಿಜ್ ನಲ್ಲಿಟ್ಟರೆ ಸೌತೆಕಾಯಿ ಬಹುಬೇಗ ಹಾಳಾಗುತ್ತದೆ. ತಣ್ಣನೆಯ ಸೌತೆಕಾಯಿ ಸೇವನೆ ಮಾಡಲು ನೀವು ಬಯಸುವುದಾದರೆ ತಿನ್ನುವ ಸ್ವಲ್ಪ ಸಮಯ ಮೊದಲು ಸೌತೆಕಾಯಿಯನ್ನು ಫ್ರಿಜ್ ನಲ್ಲಿಡಿ.
ನಿಂಬೆ ಹಣ್ಣನ್ನು ಫ್ರಿಜ್ ನಲ್ಲಿಡುವುದರಿಂದ ಅದ್ರಲ್ಲಿರುವ ರಸ ಬತ್ತಿಹೋಗುತ್ತದೆ. ಜೊತೆಗೆ ರುಚಿ ಕೂಡ ಹಾಳಾಗುತ್ತದೆ.
ಆಲೂಗಡ್ಡೆ ಹಾಗೂ ಬಾಳೆಹಣ್ಣನ್ನು ಕೂಡ ಫ್ರಿಜ್ ನಲ್ಲಿಡಬೇಡಿ. ಬಾಳೆಹಣ್ಣು ಕಪ್ಪಗಾಗುತ್ತದೆ. ಆಲೂಗಡ್ಡೆ ಕೂಡ ಬೇಗ ಹಾಳಾಗುತ್ತದೆ.
ಬೆಳ್ಳುಳ್ಳಿಯನ್ನೂ ಫ್ರಿಜ್ ನಲ್ಲಿಡಬೇಡಿ. ಈರುಳ್ಳಿಯನ್ನು ಕೂಡ ಫ್ರಿಜ್ ನಿಂದ ಹೊರಗಿಡಿ.