ಮಹಿಳೆ ಮನೆಯ ದೀಪ. ಮನೆ, ಮಕ್ಕಳು, ಸಂಸಾರದ ಜೊತೆಗೆ ವೃತ್ತಿ ಬದುಕನ್ನು ಸರಿದೂಗಿಸಿಕೊಂಡು ಹೋಗುವ ಮಹಿಳೆ ಆರೋಗ್ಯವನ್ನು ನಿರ್ಲಕ್ಷ್ಯ ಮಾಡ್ತಿದ್ದಾಳೆ. ಎಲ್ಲವನ್ನೂ, ಎಲ್ಲರನ್ನೂ ನಿಭಾಯಿಸುವ ಮಹಿಳೆ ತನ್ನ ಆರೋಗ್ಯದ ಬಗ್ಗೆ ಮುಖ್ಯವಾಗಿ ಗಮನ ನೀಡಬೇಕಾಗುತ್ತದೆ.
ಸಿಕ್ಕ ಸಮಯದಲ್ಲಿ ವ್ಯಾಯಾಮ, ಜಿಮ್ ಗೆ ಹೋಗುವ ಕೆಲ ಮಹಿಳೆಯರು ಡಯಟ್ ಪಾಲಿಸ್ತಾರೆ. ಡಯಟ್ ಮಾಡುವ ಮಹಿಳೆಯರು ಕೊಬ್ಬಿನ ಆಹಾರದಿಂದ ದೂರವಿರ್ತಾರೆ. ನೀವೂ ಡಯಟ್ ನಲ್ಲಿದ್ದರೆ ಕೆಲವೊಂದು ಸಂಗತಿಗಳನ್ನು ಮರೆಯಬೇಡಿ. ಪ್ರೋಟಿನ್ ಹಾಗೂ ವಿಟಮಿನ್ ಭರಿತ ಆಹಾರವನ್ನು ಅವಶ್ಯವಾಗಿ ತೆಗೆದುಕೊಳ್ಳಿ. ಡಯಟ್ ಹೆಸರಿನಲ್ಲಿ ಪ್ರೋಟಿನ್, ವಿಟಮಿನ್ ದೇಹ ಸೇರದೆ ಹೋದ್ರೆ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡುತ್ತದೆ.
ದೇಹದ ಅನೇಕ ಸಮಸ್ಯೆಗಳಿಗೆ ನೀರು ಪರಿಹಾರ. ಪ್ರತಿದಿನ ಸಾಧ್ಯವಾದಷ್ಟು ನೀರು ಕುಡಿಯಿರಿ. ಇದು ಆರೋಗ್ಯದ ಜೊತೆ ಸೌಂದರ್ಯ ವೃದ್ಧಿಗೆ ಕಾರಣವಾಗುತ್ತದೆ. ನಿಂಬೆ ರಸ ಬೆರೆಸಿದ ನೀರು ಜೀರ್ಣಕ್ರಿಯೆ ಸುಲಭವಾಗುವಂತೆ ಮಾಡುತ್ತದೆ.
ಎಷ್ಟೇ ಕೆಲಸದ ಒತ್ತಡವಿದ್ದರೂ ಬೆಳಗಿನ ಉಪಹಾರವನ್ನು ಬಿಡಬೇಡಿ. ಪೌಷ್ಠಿಕ ಆಹಾರ ಸೇವನೆ ಜೊತೆ ದಿನವನ್ನು ಶುರು ಮಾಡಿ. ಇದು ದೇಹಕ್ಕೆ ಶಕ್ತಿ ನೀಡುತ್ತದೆ.
ಡಯಟ್ ಬಗ್ಗೆ ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ. ಆರೋಗ್ಯಕರ ಆಹಾರ ಸೇವನೆ ಮಾಡುವ ಜೊತೆಗೆ ವ್ಯಾಯಾಮ ಮಾಡಿದ್ರೆ ಸಾಕು.
ಆರೋಗ್ಯದ ಜೊತೆ ಸೌಂದರ್ಯದ ಬಗ್ಗೆಯೂ ಗಮನ ನೀಡಬೇಕು. ಸೌಂದರ್ಯ ವೃದ್ಧಿಗಾಗಿ ರಾಸಾಯನಿಕ ವಸ್ತುಗಳನ್ನು ಬಳಸುವ ಬದಲು ಮನೆ ಮದ್ದನ್ನು ಹೆಚ್ಚಾಗಿ ಬಳಸಿ.
ಆರೋಗ್ಯವಾಗಿರಲು ಪ್ರತಿದಿನ ವ್ಯಾಯಾಮ ಬಹಳ ಮುಖ್ಯ. ಪ್ರತಿದಿನ 30 ನಿಮಿಷ ವ್ಯಾಯಾಮ ಮಾಡಿ. ಜಿಮ್ ಗೆ ಹೋಗುವ ಬದಲು ಪಾರ್ಕ್ ನಲ್ಲಿ ಆಟ ಅಥವಾ ವಾಕಿಂಗ್ ಮಾಡಬಹುದು.
ಆರು ತಿಂಗಳಿಗೊಮ್ಮೆ ಇಡೀ ದೇಹದ ಫುಲ್ ಚೆಕ್ ಅಪ್ ಮಾಡಿಸಿಕೊಳ್ಳುವುದು ಸೂಕ್ತ. ಇದು ಗಂಭೀರ ರೋಗದ ಬಗ್ಗೆ ಮೊದಲೇ ಮುನ್ಸೂಚನೆ ನೀಡುತ್ತದೆ.
ಊಟದಲ್ಲಿ ಸಂಪೂರ್ಣ ಕಟ್ಟುನಿಟ್ಟಿನ ಅವಶ್ಯಕತೆಯಿಲ್ಲ. ಆಗಾಗ ನಿಮಗಿಷ್ಟವಾಗುವ ಸ್ಪೈಸಿ ಆಹಾರ ಸೇವನೆ ಮಾಡಬಹುದು. ಆದ್ರೆ ಮಿತಿಯಿರಲಿ.
ಊಟದಲ್ಲಿ ಹಣ್ಣು ಹಾಗೂ ತರಕಾರಿ ಸೇವನೆ ಜಾಸ್ತಿಯಿರಲಿ.
ಮದ್ಯಪಾನ ಹಾಗೂ ಧೂಮಪಾನ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಸಾಧ್ಯವಾದಷ್ಟು ಇವೆರಡರಿಂದ ದೂರವಿರುವುದು ಒಳ್ಳೆಯದು.