ಬೆಂಗಳೂರು : ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ ಪ್ರಾರ್ಥನೆ ಸಮಯದಲ್ಲಿ `ಸಂವಿಧಾನ ಪೀಠಿಕೆ’ ಓದುವುದು ಮತ್ತು ಶಾಲೆಗಳಲ್ಲಿ ಪೀಠಿಕೆಯನ್ನು ಪ್ರದರ್ಶಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಭಾರತ ಸಂವಿಧಾನದ ಪೀಠಿಕೆಯನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರತಿ ನಿತ್ಯ ಶಾಲೆಗಳಲ್ಲಿ ಪ್ರಾರ್ಥನ ಸಮಯದಲ್ಲಿ ಓದುವ ಕುರಿತು ಹಾಗೂ ಹಾಗೂ ಉಲ್ಲೇಖ (1) ರ ಸರ್ಕಾರದ ಆದೇಶ ದಿನಾಂಕ:30/06/2023 ರ ನಿತ್ಯಾ ಸಂವಿಧಾನ ಪೀಠಿಕೆಯ ಫಲಕವನ್ನು ಶಾಲೆಗಳಲ್ಲಿ ಸೂಕ್ತ ಸ್ಥಳದಲ್ಲಿ ಅಳವಡಿಸಲು ಈಗಾಗಲೇ ತಿಳಿಸಲಾಗಿದೆ. ಸದರಿ ಕಾರ್ಯಕ್ರಮದ ಕುರಿತು ಕೈಗೊಂಡಿರುವ ಪ್ರಗತಿ ವರದಿಯನ್ನು ಕಳಕಂಡ ನಮೂನೆಯಲ್ಲಿ ದಿನಾಂಕ:04/10/2023 ಅಂತ್ಯದೊಳಗೆ ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ.
ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವರು ದಿನಾಂಕ:06/10/2023 ರಂದು ನಡೆಯಲ್ಲಿರುವ ಉಪನಿರ್ದೇಶಕರ ಸಭೆಯಲ್ಲಿ ಸದರಿ ಕಾರ್ಯಕ್ರಮದ ಪರಿಶೀಲನ ನಡೆಸುವರು. ಆಯಾ ಜಿಲ್ಲಾ ಉಪನಿರ್ದೇಶಕರು ತಮ್ಮ ಜಿಲ್ಲೆಯಲ್ಲಿ ಸದರಿ ಕಾರ್ಯಕ್ರಮ ಅನುಷ್ಟಾನಗೊಂಡಿರುವ ಕುರಿತು ಆಯ್ದ ಫೋಟೋಗಳನ್ನು ಮತ್ತು ವಿಡಿಯೋ ಕ್ಲಿಂಪಿಗಳನ್ನು ಪೆನ್ ಡ್ರೈವ್ (PEN DRIVE) ಮೂಲಕ ತಂದು ಪ್ರದರ್ಶಿಸಲು ತಿಳಿಸಿದೆ.