ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಕರ್ನಾಟಕ ಅಂತರ್ಜಲ ಪ್ರಾಧಿಕಾರ ಅಸ್ತಿತ್ವದಲ್ಲಿರುವುದರಿಂದ ಪ್ರಸ್ತುತ ಇರುವ ಹಾಗೂ ಹೊಸದಾಗಿ ಪ್ರಾರಂಭಿಸಿರುವ ಕೈಗಾರಿಕೆ/ವಾಣಿಜ್ಯ/ಮೂಲ ಸೌಕರ್ಯ ಅಭಿವೃದ್ಧಿ/ಗಣಿಗಾರಿಕೆ/ಮನರಂಜನೆ ಯೋಜನೆಗಳಲ್ಲಿನ ಅಂತರ್ಜಲ ಬಳಕೆದಾರರು ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯವಾಗಿ ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ಪಡೆಯಬೇಕಾಗಿರುತ್ತದೆ.
ಅದರಂತೆ ಸಂಬಂಧಪಟ್ಟ ಎಲ್ಲಾ ಕೈಗಾರಿಕೆ/ವಾಣಿಜ್ಯ/ಮೂಲ ಸೌಕರ್ಯ ಅಭಿವೃದ್ಧಿ/ಗಣಿಗಾರಿಕೆ/ಮನರಂಜನೆ ಯೋಜನೆಗಳಲ್ಲಿನ ಅಂತರ್ಜಲ ಬಳಕೆದಾರರು ಎನ್ಒಸಿ ಯನ್ನು ಪಡೆಯಲು https://kgwa.in/Public/ ವೆಬ್ಸೈಟ್ನ ಆನ್ಲೈನ್ ಸೇವೆಗಳಡಿ ಅರ್ಜಿ ಸಲ್ಲಿಸತಕ್ಕದ್ದು. ಟ್ಯಾಂಕರ್ ನೀರು ಸರಬರಾಜುಗೆ ಸಂಬಂಧಪಟ್ಟಂತೆ ಎನ್ಒಸಿ ಯನ್ನು ಪಡೆಯಲು ಆಯಾ ಜಿಲ್ಲೆಯ ಜಿಲ್ಲಾ ಅಂತರ್ಜಲ ಕಚೇರಿಗೆ ಭೌತಿಕವಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಜಿಲ್ಲಾ ಅಂತರ್ಜಲ ಕಚೇರಿಗಳನ್ನು ಸಂಪರ್ಕಿಸುವುದು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.