ಸಮುದ್ರ ಶಾಸ್ತ್ರದಲ್ಲಿ ಮನುಷ್ಯನ ದೇಹ ಹಾಗೂ ಜ್ಯೋತಿಷ್ಯ ಶಾಸ್ತ್ರಕ್ಕಿರುವ ಸಂಬಂಧಗಳ ಬಗ್ಗೆ ಹೇಳಲಾಗಿದೆ.
ಕಣ್ಣು ಕುಣಿಯುವ ಬಗ್ಗೆಯೂ ಸಮುದ್ರ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಮಾನವನ ದೇಹ ಅತ್ಯಂತ ಸಂವೇದನಾಶೀಲವಾಗಿರುತ್ತದೆ. ಪ್ರತಿಯೊಂದು ಅಂಗವೂ ಘಟನೆ ಬಗ್ಗೆ ಮೊದಲೇ ಮುನ್ಸೂಚನೆ ನೀಡುತ್ತದೆ.
ವ್ಯಕ್ತಿಯ ಹಣೆ ಮೇಲೆ ತುಡಿತ ಕಾಣಿಸಿಕೊಂಡ್ರೆ ಭೌತಿಕ ಸುಖ ಪ್ರಾಪ್ತಿಯಾಗುತ್ತದೆ ಎಂದರ್ಥ. ಹಣ ಪ್ರಾಪ್ತಿಯ ಸಂಕೇತವನ್ನು ಇದು ನೀಡುತ್ತದೆ.
ಮನುಷ್ಯನ ಎರಡೂ ಕೆನ್ನೆಗಳು ಒಂದೇ ಬಾರಿ ಹಾರಿದ ಅನುಭವವಾದ್ರೆ ಧನ ಪ್ರಾಪ್ತಿಯ ಸಾಧ್ಯತೆ ಹೆಚ್ಚಿರುತ್ತದೆ. ಬಲಗಣ್ಣು ಕುಣಿಯಲು ಶುರುವಾದ್ರೆ ಕೆಲವೇ ದಿನಗಳಲ್ಲಿ ಬೇಡಿಕೆ ಈಡೇರಲಿದೆ ಎಂದರ್ಥ. ಎಡಗಣ್ಣು ಕುಣಿಯಲು ಶುರುವಾದ್ರೆ ಶೀರ್ಘವೇ ಉತ್ತಮ ಸುದ್ದಿ ಬರಲಿದೆ ಎಂಬ ನಂಬಿಕೆಯಿದೆ.
ವ್ಯಕ್ತಿಯ ತುಟಿಗಳು ಕುಣಿಯುತ್ತಿರುವ ಅನುಭವವಾದ್ರೆ ಜೀವನದಲ್ಲಿ ಹೊಸ ಸ್ನೇಹಿತನ ಆಗಮನವಾಗಲಿದೆ. ಆತನಿಂದ ಹೆಚ್ಚು ಪ್ರೀತಿ ಸಿಗಲಿದೆ ಎಂಬುದರ ಸಂಕೇತವಾಗಿದೆ.
ಸೊಂಟದ ಭಾಗ ಕುಣಿದ ಅನುಭವವಾದ್ರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಾಗಲಿದೆ ಎಂದರ್ಥ.
ಬಲತೊಡೆ ಕುಣಿದ ಅನುಭವವಾದ್ರೆ ಕಿರಿಕಿರಿ, ಅವಮಾನ ಎದುರಿಸಬೇಕಾಗುತ್ತದೆ. ಎಡ ತೊಡೆ ಬಡಿದುಕೊಂಡ್ರೆ ಆರ್ಥಿಕ ವೃದ್ಧಿಯಾಗುತ್ತದೆ ಎಂಬುದರ ಸಂಕೇತ ನೀಡುತ್ತದೆ.