ಪ್ರಾಚೀನ ಕಾಲದಿಂದಲೂ ವಿವಿಧ ದೇವರ ಫೋಟೋಗಳನ್ನು, ಮೂರ್ತಿಗಳನ್ನು ಮನೆಯಲ್ಲಿ ಹಾಕಲಾಗುತ್ತದೆ. ಕೆಲವರ ಮನೆಯಲ್ಲಿ ದೇವರ ಮನೆ, ಹಾಲ್ ಸೇರಿದಂತೆ ಅನೇಕ ಕಡೆ ಫೋಟೋಗಳನ್ನು ಹಾಕಿರ್ತಾರೆ. ಇದು ಅನೇಕ ವಾಸ್ತು ದೋಷಗಳನ್ನು ನಿವಾರಣೆ ಮಾಡುತ್ತೆ ಎಂಬ ನಂಬಿಕೆ ಇದೆ.
ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿ ಯಾವುದೇ ದೇವಾನುದೇವತೆಗಳ ಫೋಟೋ ಹಾಕಿದ್ರೆ ಮನೆಯಲ್ಲಿರುವ ಅನೇಕ ಸಮಸ್ಯೆಗಳು ನಿವಾರಣೆಯಾಗಲಿವೆ. ಮನೆಯಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ. ಹನುಮಂತನ ಪ್ರತಿಮೆ ಹಾಗೂ ಫೋಟೋಗಳನ್ನು ಹಾಕುವುದರಿಂದ ಸಾಕಷ್ಟು ಲಾಭಗಳಿವೆ. ಆದ್ರೆ ಎಲ್ಲೆಂದರಲ್ಲಿ ಹನುಮಂತನ ಫೋಟೋ ಹಾಕುವುದು ಒಳ್ಳೆಯದಲ್ಲ.
ಯಾವುದೇ ಕಾರಣಕ್ಕೂ ಹನುಮಂತನ ಮೂರ್ತಿ ಅಥವಾ ಫೋಟೋವನ್ನು ಬೆಡ್ ರೂಂನಲ್ಲಿ ಹಾಕಬೇಡಿ. ಮನೆಯ ಪವಿತ್ರ ಜಾಗ ಅಥವಾ ದೇವರ ಕೋಣೆಯಲ್ಲಿ ಮಾತ್ರ ಹನುಮಂತನ ಫೋಟೋ ಇರಲಿ.
ವಾಸ್ತುಶಾಸ್ತ್ರದ ಪ್ರಕಾರ, ಹನುಮಂತನ ಮುಖ ದಕ್ಷಿಣ ದಿಕ್ಕಿಗೆ ಬರುವಂತೆ ಇಡಿ. ಯಾಕೆಂದ್ರೆ ಹನುಮಂತ ತನ್ನ ಶಕ್ತಿಯನ್ನು ದಕ್ಷಿಣ ದಿಕ್ಕಿಗೆ ಪ್ರಯೋಗ ಮಾಡಿದ್ದ. ದಕ್ಷಿಣ ದಿಕ್ಕಿಗೆ ಫೋಟೋ ಹಾಕುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಅಂಶಗಳ ಶಕ್ತಿ ಕಡಿಮೆಯಾಗುತ್ತದೆ. ಸುಖ-ಶಾಂತಿ ನೆಲೆಸಿರುತ್ತದೆ.
ಪಂಚಮುಖಿ, ಪರ್ವತ ಎತ್ತಿ ಹಿಡಿದ ಹನುಮಂತ ಹಾಗೂ ರಾಮನ ಭಜನೆ ಮಾಡುತ್ತಿರುವ ಹನುಮಂತನ ಫೋಟೋವನ್ನು ಮಾತ್ರ ಹಾಕುವುದು ಒಳ್ಳೆಯದು.
ಯುವಕರು ದಿನದಲ್ಲಿ ಒಮ್ಮೆಯಾದ್ರೂ ಹನುಮಾನ್ ಚಾಲೀಸ್ ಪಠಣ ಮಾಡಬೇಕು.