ಮುಖ್ಯ ಕೆಲಸಕ್ಕೆ ಹೋಗುವಾಗ ಮನಸ್ಸಿನಲ್ಲೊಂದು ಅಳುಕಿರುತ್ತದೆ. ಕೆಲಸ ಸುಸೂತ್ರವಾಗಿ ಆಗುತ್ತಾ ಇಲ್ವಾ ಎಂಬ ಭಯ ಮನೆ ಮಾಡಿರುತ್ತದೆ. ಕೆಲಸಕ್ಕೆ ಹೋಗುವ ಮುನ್ನ ಖಾಲಿ ಕೊಡ ತಂದ್ರೆ ಅಪಶಕುನ ಅಂತಾ ಸ್ವಲ್ಪ ಹೊತ್ತು ಮನೆಯಲ್ಲಿ ಕುಳಿತು ಹೋಗುವವರಿದ್ದಾರೆ.
ಒತ್ತಡದ ಜೀವನದಲ್ಲಿ ಇದನ್ನೆಲ್ಲ ನೋಡೋದು ಕಷ್ಟ. ಆದರೆ ನಾವು ನಂಬಿ ಬಂದಿರುವ ಜ್ಯೋತಿಷ್ಯ ಶಾಸ್ತ್ರ ಯಾವುದು ಶಕುನ, ಯಾವುದು ಅಪಶಕುನ ಎಂಬುದನ್ನು ವಿವರಿಸಿದೆ.
ಮಹತ್ವದ ಕೆಲಸಕ್ಕೆ ಹೋಗುವಾಗ ಹಿಂದಿನಿಂದ ಯಾರಾದ್ರೂ ಕೂಗಿದ್ರೆ ನಿಮ್ಮ ಕೆಲಸ ಕೆಟ್ಟಂತೆ.
ಕೆಲಸಕ್ಕೆ ಹೋಗುವ ವೇಳೆ ಮನೆಯ ವ್ಯಕ್ತಿ ಟೀ ಕೇಳಿದ್ರೆ ಹೋದ ಕೆಲಸ ಕೆಡೋದು ನಿಶ್ಚಿತ.
ಮನೆಯಿಂದ ವ್ಯಕ್ತಿ ಹೊರಬಿದ್ದ ತಕ್ಷಣ ಮನೆ ಸದಸ್ಯ ಕೈನಲ್ಲಿ ಪೊರಕೆ ಹಿಡಿದ್ರೆ ಹೋದ ಕೆಲಸವಾಗೋದು ಅನುಮಾನ.
ನೀವು ಮನೆಯಿಂದ ಹೊರಬೀಳುವ ವೇಳೆ ಕಣ್ಣಿಗೆ ನಾಯಿ ಕಂಡ್ರೆ, ಅದು ನಿಮ್ಮನ್ನು ನೋಡಿ ಬೊಗಳಿದ್ರೆ ಅದು ಅಪಶಕುನ.
ಅಪರಿಚಿತ ನಾಯಿಯೊಂದು ನಿಮ್ಮ ಕಾರನ್ನು ಪದೇ ಪದೇ ಮೂಸುತ್ತಿದ್ದರೆ ಏನೋ ಕೆಟ್ಟದ್ದಾಗುತ್ತದೆ ಎಂದರ್ಥ.
ಮನೆಯಿಂದ ಹೊರ ಬೀಳುವ ವೇಳೆ ಬೆಕ್ಕು ನಿದ್ರೆ ಮಾಡಿದ್ದರೆ ಇಲ್ಲವೆ ಎರಡು ಬೆಕ್ಕುಗಳು ಕಿತ್ತಾಡಿಕೊಳ್ಳುತ್ತಿದ್ದರೆ ಅದು ಕೂಡ ಒಳ್ಳೆಯ ಸಂಕೇತವಲ್ಲ.
ಸಂಜೆ ವೇಳೆ ಪ್ರಯಾಣ ಬೆಳೆಸುವಾಗ ಮಂಗ ಕಂಡರೆ ಅದು ಶುಭ ಸಂಕೇತ.
ಕೆಲಸಕ್ಕೆ ಹೋಗುವ ವೇಳೆ ಮುಂಗುಸಿ ಕಂಡರೆ ಬಹಳ ಒಳ್ಳೆಯ ಶಕುನ.
ದನ ಕರುವಿಗೆ ಹಾಲುಣಿಸುತ್ತಿರುವುದು ಕಂಡರೆ ಅದನ್ನು ಶುಭ ಶಕುನ ಎನ್ನುತ್ತಾರೆ.
ಮನೆಯಿಂದ ಹೊರ ಹೋಗುವ ವೇಳೆ ಮನೆಯಲ್ಲಿದ್ದ ವ್ಯಕ್ತಿ ಸೀನಿದ್ರೆ ಅಪಶಕುನ.
ಕನಸಿನಲ್ಲಿ ಹಾಲು ಕಂಡ್ರೆ ಅಪಶಕುನ.
ಮನೆಯಿಂದ ಹೊರ ಬೀಳುವ ವೇಳೆ ಸನ್ಯಾಸಿ ಕಣ್ಣಿಗೆ ಬಿದ್ದರೆ ಶುಭ.