ಆಧುನಿಕ ಮನೆಗಳಲ್ಲಿ ಗೆಸ್ಟ್ ರೂಂ ಪ್ರತ್ಯೇಕವಾಗಿರುವುದು ಸಾಮಾನ್ಯ. ಹೀಗಿರುವಾಗ ಗೆಸ್ಟ್ ರೂಂ ಹೇಗೆ ಇರುವಂತೆ ಪ್ಲಾನ್ ಮಾಡಬೇಕು ಎಂಬುದು ನಿಮಗೆ ಗೊತ್ತೇ?
ಅತಿಥಿಗಳ ಕೊಠಡಿಯಲ್ಲಿ ಮಡಿಚಿಡುವ ಮಂಚದ ವ್ಯವಸ್ಥೆಯನ್ನು ಹಾಕಿಕೊಳ್ಳುವುದು ಒಳ್ಳೆಯದು. ಯಾರೂ ಇಲ್ಲದಿದ್ದಾಗ ಮನೆ ಸ್ವಚ್ಛಗೊಳಿಸುವುದು ಸುಲಭವಾಗುತ್ತದೆ.
ಅತಿಥಿಗಳ ಉಡುಪು ಇಡಲು ವಾರ್ಡ್ ರೋಬ್ ಹಾಗೂ ಡ್ರಾಯರ್ ಮಾಡಿಸಲೇ ಬೇಕು. ಹ್ಯಾಂಗಿಗ್, ಬೆಡ್ ಸ್ಪ್ರೆಡ್, ತಲೆದಿಂಬು ಇಡಲು ಒಂದಿಷ್ಟು ಜಾಗ ಇರಲಿ. ಡಸ್ಟ್ ಬಿನ್ ಇಡಲು ಮರೆಯದಿರಿ.
ಅಟ್ಯಾಚ್ ಆಗಿರುವ ಬಾತ್ ರೂಂನಲ್ಲಿ ಒಗೆದ ಬಟ್ಟೆ ಇಡಲು, ಸೋಪು ಶ್ಯಾಂಪೂ ಇಡಲು ಪ್ರತ್ಯೇಕ ಜಾಗವಿರಲಿ. ಇಂದು ಯಾವ ಅತಿಥಿಗಳು ಬಂದರೂ ಅವರ ಕೈಯಲ್ಲಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಇದ್ದೇ ಇರುತ್ತದೆ. ಹಾಗಾಗಿ ಅದನ್ನು ಇಡಲು ಮತ್ತು ಬಳಸಲು ಸೂಕ್ತ ವ್ಯವಸ್ಥೆ ಇರಲಿ. ವಿದ್ಯುತ್ ಪ್ಲಗ್ ಗಳಿರಲಿ.
ಸ್ಥಳೀಯ ದೂರವಾಣಿ ಸಂಖ್ಯೆಗಳ ವಿವರ ನೀಡುವ ದೂರವಾಣಿ ಪುಸ್ತಕವಿರಲಿ. ಬಾಟಲಿ ನೀರು, ಹೂಕುಂಡ ಕೊಠಡಿಯ ಸೌಂದರ್ಯ ಹೆಚ್ಚಿಸುವಂತಿರಲಿ.