ರಾತ್ರಿ ಮೊಬೈಲ್ ನಲ್ಲಿ ಸಿನಿಮಾ ನೋಡುತ್ತಾ ಚಿಪ್ಸ್ ತಿನ್ನುವ ಅಭ್ಯಾಸ ನಿಮಗಿದೆಯೇ. ಹಾಗಿದ್ದರೆ ನಿಮ್ಮ ದೇಹ ತೂಕ ಕಡಿಮೆಯಾಗುವುದು ಬಲು ಕಷ್ಟ.
ಹೌದು ರಾತ್ರಿ ವೇಳೆ ನೀವು ಏನು ತಿನ್ನುತ್ತೀರಿ ಎಂಬುದು ನಿಮ್ಮ ದೇಹ ತೂಕ ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಮುಖ್ಯ ಕಾರಣವಾಗುತ್ತದೆ. ರಾತ್ರಿ ವೇಳೆ ಹೊಟ್ಟೆ ತುಂಬಾ ತಿನ್ನುವುದು ಕೂಡಾ ಬೇಗ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ರಾತ್ರಿ ಚಾಕಲೇಟ್ ಸೇವನೆ ಮಾಡುವುದರಿಂದ ನರಗಳ ಮೇಲೆ ಪ್ರಭಾವ ಬೀರಿ ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಬರುವುದಿಲ್ಲ. ಬಹಳ ಹೊತ್ತು ನೀವು ಎಚ್ಚರದಿಂದಲೇ ಉಳಿಯಬೇಕಾಗುತ್ತದೆ.
ರಾತ್ರಿ ವೇಳೆ ಐಸ್ ಕ್ರೀಮ್ ಸೇವನೆ ಮಾಡುವುದರಿಂದ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚುತ್ತದೆ. ರಾತ್ರಿ ಹೊತ್ತು ದೇಹಕ್ಕೆ ಕೊಬ್ಬನ್ನು ಜೀರ್ಣಿಸಿಕೊಳ್ಳುವ ಅವಕಾಶ ದೊರೆಯುವುದಿಲ್ಲ. ಹಾಗಾಗಿ ಐಸ್ ಕ್ರೀಮ್ ನ ಸಕ್ಕರೆ ಕೊಬ್ಬಾಗಿ ಉಳಿಯುತ್ತದೆ.
ಮಲಗುವ ಮುನ್ನ ಸಿಹಿತಿಂಡಿ ಸೇವನೆ ಮಾಡುವುದು ಕೂಡ ಒಳ್ಳೆಯದಲ್ಲ. ಇದರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲರಿ ಗಳು ಇರುತ್ತವೆ. ಇದು ಕಣ್ಣಿನ ಪೊರೆಯ ಸಮಸ್ಯೆಗೂ ಕಾರಣವಾಗಬಹುದು.