alex Certify ಚಿಕ್ಕ ಮಕ್ಕಳು ನಾಯಿಗಳೊಂದಿಗೆ ಆಟವಾಡುವುದು ಮತ್ತು ಮಲಗುವುದು ಅಪಾಯಕಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕ್ಕ ಮಕ್ಕಳು ನಾಯಿಗಳೊಂದಿಗೆ ಆಟವಾಡುವುದು ಮತ್ತು ಮಲಗುವುದು ಅಪಾಯಕಾರಿ…!

ಮನೆಯಲ್ಲಿ ಸಾಕು ನಾಯಿಗಳಿದ್ದರೆ ಮಕ್ಕಳು ಅವುಗಳೊಂದಿಗೆ ಸ್ನೇಹದಿಂದಿರುತ್ತಾರೆ. ನಾಯಿಗಳು ಕೂಡ ಸದಾ ಮಕ್ಕಳ ಜೊತೆಗಿರುತ್ತವೆ, ಸದಾ ಆಟವಾಡಲು ಬಯಸುತ್ತವೆ. ಮಕ್ಕಳು ತಮ್ಮ ಮನೆಯ ಸಾಕುಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಾರೆ. ನಾಯಿಗಳನ್ನು ತಬ್ಬಿಕೊಳ್ಳುವುದು, ಮುದ್ದಿಸುವುದು ಮಾಡುತ್ತಾರೆ. ಎಷ್ಟೋ ಮಕ್ಕಳು ನಾಯಿಗಳನ್ನು ತಮ್ಮ ಹಾಸಿಗೆಯಲ್ಲಿ ಮಲಗಿಸಿಕೊಳ್ಳುತ್ತಾರೆ.

ಸಾಕುಪ್ರಾಣಿಗಳೊಂದಿಗೆ ಒಂದೇ ಹಾಸಿಗೆಯ ಮೇಲೆ ಮಲಗುವುದು ಮತ್ತು ಅವುಗಳೊಂದಿಗೆ ಆಟವಾಡುವುದು ಹಾನಿಕಾರಕ. ನಾಯಿ, ಬೆಕ್ಕು ಇತ್ಯಾದಿ ಸಾಕುಪ್ರಾಣಿಗಳೊಂದಿಗೆ ಚಿಕ್ಕ ಮಕ್ಕಳು ಮಲಗುವುದರಿಂದ ಅನೇಕ ಸಮಸ್ಯೆಗಳಾಗುತ್ತವೆ.

ಅಲರ್ಜಿಅಮೆರಿಕದಲ್ಲಿ ಅನೇಕರಿಗೆ ಸಾಕುಪ್ರಾಣಿಗಳೆಂದರೆ ಅಲರ್ಜಿ. ವಿಶೇಷವಾಗಿ ಚಿಕ್ಕ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ, ಆದ್ದರಿಂದ ಪ್ರಾಣಿಗಳ ಜೊತೆಗಿರುವುದರಿಂದ ಮಕ್ಕಳಿಗೆ ಅಲರ್ಜಿ ಆಗಬಹುದು. ನಾಯಿ ಮತ್ತು ಬೆಕ್ಕುಗಳನ್ನು ಮಕ್ಕಳೊಂದಿಗೆ ಮಲಗಲು ಬಿಡಬಾರದು. ಈ ಪ್ರಾಣಿಗಳ ಕೂದಲು ಮತ್ತು ಚರ್ಮದಿಂದ ಮಕ್ಕಳಿಗೆ ಅಲರ್ಜಿ ತಗುಲುವ ಸಾಧ್ಯತೆ ಇರುತ್ತದೆ. ಅವು ಚರ್ಮ ಅಥವಾ ಉಸಿರಾಟದ ಪ್ರದೇಶದ ಮೂಲಕ ದೇಹವನ್ನು ಪ್ರವೇಶಿಸುತ್ತವೆ. ಇದರಿಂದ ಉಸಿರಾಟದ ತೊಂದರೆಗಳು, ಚರ್ಮದ ದದ್ದುಗಳು ಅಥವಾ ತುರಿಕೆ, ಕಣ್ಣಿನ ಕಿರಿಕಿರಿಯಂತಹ ಅಲರ್ಜಿಯ ಅನೇಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು ಕೆಲವರಲ್ಲಿ ತುಂಬಾ ಗಂಭೀರ ಸ್ವರೂಪವನ್ನು ಪಡೆದುಕೊಳ್ಳಬಹುದು.

ಸೋಂಕಿನ ಅಪಾಯಸಾಕುಪ್ರಾಣಿಗಳು ತಮ್ಮೊಂದಿಗೆ ಅನೇಕ ರೀತಿಯ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾಗಳನ್ನು ತರುತ್ತವೆ. ಇವುಗಳಲ್ಲಿ ಕೆಲವು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದ್ದರೆ ಕೆಲವು ಹಾನಿಕಾರಕವಾಗಬಹುದು. ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ದುರ್ಬಲವಾಗಿರುವುದರಿಂದ ಅವರು ಸುಲಭವಾಗಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾರೆ. ಆದ್ದರಿಂದ ಮಕ್ಕಳು ಸಾಕುಪ್ರಾಣಿಗಳೊಂದಿಗೆ ಮಲಗಲು ಬಿಡಬಾರದು.

ನಿದ್ರಾಭಂಗಕೆಲವು ದೊಡ್ಡ ಗಾತ್ರದ ನಾಯಿಗಳು ಸಾಮಾನ್ಯವಾಗಿ ಹಾಸಿಗೆಯಲ್ಲಿ ಹೆಚ್ಚು ಜಾಗವನ್ನು ಆವರಿಸಿಕೊಳ್ಳುತ್ತವೆ. ಇದು ಮಗುವಿನ ನಿದ್ದೆಗೆ ಅಡ್ಡಿಯಾಗುತ್ತದೆ. ರಾತ್ರಿ ನಾಯಿ ಇದ್ದಕ್ಕಿದ್ದಂತೆ ಕೂಗಲು ಪ್ರಾರಂಭಿಸಬಹುದು. ಇದರಿಂದ ಕೂಡ ಮಗುವಿನ ನಿದ್ದೆಗೆ ತೊಂದರೆಯಾಗುತ್ತದೆ. ಮಕ್ಕಳನ್ನು ನಾಯಿಗಳೊಂದಿಗೆ ಒಂಟಿಯಾಗಿ ಬಿಡಬಾರದು ಮತ್ತು ಅವರೊಂದಿಗೆ ಮಲಗದಂತೆ ರಕ್ಷಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...