ಗರ್ಭಾವಸ್ಥೆಯಲ್ಲಿ ಕೆಲವೊಂದು ಆಹಾರ ಕ್ರಮದ ಬಗ್ಗೆ ತುಂಬಾ ಎಚ್ಚರವಹಿಸಬೇಕು. ಕೆಲವೊಂದು ಆಹಾರಗಳು ತಾಯಿ ಹಾಗೂ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಕೆಲವೊಮ್ಮೆ ಗರ್ಭಪಾತ ಕೂಡ ಆಗಬಹುದು. ಇಲ್ಲಿ ಗರ್ಭಿಣಿಯರು ಯಾವ ಹಣ್ಣುಗಳನ್ನು ತಿನ್ನುವುದು ಸುರಕ್ಷಿತವಲ್ಲ ಎಂಬ ಮಾಹಿತಿ ನೀಡಲಾಗಿದೆ.
ಪೈನಾಪಲ್
ಗರ್ಭಿಣಿಯರು ಪೈನಾಪಲ್ ತಿನ್ನಬಾರದೆಂಬ ಸಲಹೆ ನೀಡುತ್ತಾರೆ. ಪೈನಾಪಲ್‌ನಲ್ಲಿ ಅತ್ಯಧಿಕ ಬ್ರೊಮೆಲೈನ್ ಅಂಶವಿರುವುದರಿಂದ ಗರ್ಭಪಾತ ಉಂಟಾಗುವ ಸಾಧ್ಯತೆ ಇದೆ. ಇನ್ನು ಕೆಲವರಿಗೆ ಅವಧಿ ಪೂರ್ವ ಹೆರಿಗೆಯಾಗುವಂತೆ ಮಾಡುತ್ತದೆ.
ದ್ರಾಕ್ಷಿ
ದ್ರಾಕ್ಷಿಯಲ್ಲಿ ಉತ್ತಮ ಪೋಷಕಾಂಶಗಳಿವೆ. ಆದರೆ ಅದರ ಸಿಪ್ಪೆಯಲ್ಲಿರುವ ಅಂಶ ಗರ್ಭಿಣಿಯರಿಗೆ ಅಷ್ಟು ಒಳ್ಳೆಯದಲ್ಲ. ಅಲ್ಲದೆ ಗರ್ಭಿಣಿಯರಿಗೆ ಕಪ್ಪು ದ್ರಾಕ್ಷಿ ತಿಂದರೆ ಬೇಗನೆ ಜೀರ್ಣವಾಗುವುದಿಲ್ಲ. ಆದ್ದರಿಂದ ದ್ರಾಕ್ಷಿ ತಿನ್ನಬೇಡಿ ಎಂಬ ಸಲಹೆ ನೀಡುತ್ತಾರೆ.
ಪಪ್ಪಾಯಿ
ಪಪ್ಪಾಯಿ ತಿಂದರೆ ಗರ್ಭಪಾತವಾಗುವ ಸಾಧ್ಯತೆ ಇದೆ. ಪಪ್ಪಾಯಿಯಲ್ಲಿರುವ ಲ್ಯಾಟೆಕ್ಸ್ ಅಂಶ ಗರ್ಭಕೋಶದ ಮೇಲೆ ಒತ್ತಡ ಹಾಕುತ್ತದೆ. ಇದನ್ನು ಅಧಿಕವಾಗಿ ತಿನ್ನುವುದರಿಂದ ಭ್ರೂಣಕ್ಕೆ ಅಪಾಯ.
ಕಲ್ಲಂಗಡಿ ಹಣ್ಣು
ಕೆಲವರಿಗೆ ಗರ್ಭಾವಸ್ಥೆಯಲ್ಲಿ ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದರಿಂದ ಕಲ್ಲಂಗಡಿ ಹಣ್ಣು ಒಳ್ಳೆಯದಲ್ಲ ಅನ್ನುತ್ತಾರೆ.
ಪೀಚ್
ಪೀಚ್ ಹೆಚ್ಚಾಗಿ ತಿಂದರೆ ದೇಹದ ಉಷ್ಣತೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಗರ್ಭಪಾತವಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಗಂಟಲು ಕೆರೆತ ಕೂಡ ಉಂಟಾಗಬಹುದು.