ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ತ್ವಚೆ ಸಂಬಂಧಿ ಸಮಸ್ಯೆಗಳಿಗೆ ಮಾತ್ರವಲ್ಲ ಹೊಟ್ಟೆ, ಹೃದಯ ಆರೋಗ್ಯ ಕಾಪಾಡಲು ಇದು ಸಹಕಾರಿ ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಆದರೆ ಈ ಕೆಲವು ಸಮಸ್ಯೆಗಳು ಇರುವವರು ಇದರಿಂದ ದೂರವಿರುವುದು ಒಳ್ಳೆಯದು.
ಅಸ್ತಮಾ ಅಥವಾ ಪದೇ ಪದೇ ಶೀತವಾಗುವ ಸಮಸ್ಯೆ ಇರುವವರು ಕಿತ್ತಳೆ ಹಣ್ಣಿನಿಂದ ದೂರವಿರುವುದು ಒಳ್ಳೆಯದು. ಅಸ್ತಮಾದೊಂದಿಗೆ ಮಧುಮೇಹ ಇರುವವರಂತೂ ಇದನ್ನು ತಿನ್ನುವುದು ಬೇಡವೇ ಬೇಡ.
ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಕಿತ್ತಳೆ ಹಣ್ಣನ್ನು ಸೇವಿಸದಿರಿ. ಇದರಲ್ಲಿ ಅಧಿಕ ನಾರಿನಂಶವಿದ್ದು ಹೆಚ್ಚು ಸೇವಿಸಿದರೆ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು. ಇದರಿಂದ ಅಜೀರ್ಣ ಸಮಸ್ಯೆಯೂ ಉಂಟಾಗಬಹುದು.
ಕಿತ್ತಳೆ ಹಣ್ಣಿನಲ್ಲಿ ಅತಿಯಾದ ಆಮ್ಲೀಯ ಗುಣವಿದ್ದು ಇವು ಹಲ್ಲುಗಳ ಎನಾಮಲ್ ನಲ್ಲಿರುವ ಕ್ಯಾಲ್ಸಿಯಂ ಅನ್ನು ಹಾಳು ಮಾಡಬಹುದು. ಬ್ಯಾಕ್ಟೀರಿಯಾ ಸೋಂಕು ತಗುಲಬಹುದು. ಹಲ್ಲುಗಳಲ್ಲಿ ಕುಳಿಯ ಸಮಸ್ಯೆಯೂ ಉಂಟಾಗಬಹುದು.
ಅಸಿಡಿಟಿ ಸಮಸ್ಯೆ ಹೆಚ್ಚಳಕ್ಕೂ ಇದು ಕಾರಣವಾಗಬಹುದು. ಪೊಟಾಶಿಯಂ ಸಮೃದ್ಧವಾಗಿರುವ ಕಿತ್ತಳೆ ಹಣ್ಣು ಕಿಡ್ನಿಗೆ ಹಾನಿಕಾರಕ. ಹಾಗಾಗಿ ಕಿಡ್ನಿ ಸಂಬಂಧಿ ಸಮಸ್ಯೆ ಇರುವವರು ಇದರಿಂದ ದೂರವಿರುವುದು ಒಳ್ಳೆಯದು.