
ಯಾವಾಗ್ಲೂ ಯುವಕರಾಗಿರಲು ನೀವು ಬಯಸ್ತೀರಾ? ಸದಾ ಯಂಗ್ ಆಗಿರಲು ಏನು ಮಾಡ್ಬೇಕೆಂದು ಯೋಚನೆ ಮಾಡ್ತಿದ್ದೀರಾ? ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಸಂಶೋಧನೆಯೊಂದರ ಪ್ರಕಾರ ಸೆಕ್ಸ್ ಹಾಗೂ ವೈನ್ ನಿಮ್ಮನ್ನು ಸದಾ ಯಂಗ್ ಆಗಿರಿಸುತ್ತದೆಯಂತೆ.
ಈಜು, ವಾಕಿಂಗ್ ಹಾಗೂ ವ್ಯಾಯಾಮ, ಯೋಗ ಕೂಡ ನಿಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆಯಂತೆ. ನಿಮಗೆ ವಯಸ್ಸಾಗಿದೆ ಎಂದು ಆಲೋಚನೆ ಮಾಡುತ್ತಿದ್ದರೆ ನೀವು ವಯಸ್ಸಾದವರಂತೆ ಕಾಣಿಸ್ತಿರಾ. ನಿಮ್ಮ ಚಿಂತನೆ ಮೇಲೆ ನಿಮ್ಮ ಆರೋಗ್ಯ, ಸೌಂದರ್ಯ ನಿರ್ಧರಿಸಿದೆ.
ಒಳಗೆ ಏನು ಆಲೋಚನೆ ಮಾಡ್ತೀರಾ ಎಂಬುದು ಹೊರಗೆ ಕಾಣಿಸುತ್ತದೆ. ಹುಟ್ಟುಹಬ್ಬದ ಕಾರ್ಡ್ ನಲ್ಲಿ ಹಾಕಿರುವ ನಂಬರ್ ಆಗ ಮಾನ್ಯತೆ ಪಡೆಯುವುದಿಲ್ಲ, ಸಕಾರಾತ್ಮಕ ಆಲೋಚನೆ, ಆರೋಗ್ಯಕರ ಜೀವನ ಶೈಲಿ, ನಿದ್ರೆ ಹಾಗೂ ಹಣ್ಣು-ತರಕಾರಿ ಸೇವನೆ ನಿಮ್ಮನ್ನು ಯಂಗ್ ಆಗಿರಿಸುತ್ತದೆ ಎಂದು ಅನೇಕರು ಒಪ್ಪಿಕೊಂಡಿದ್ದಾರೆ.
ನಿಯಮಿತ ಸೆಕ್ಸ್ ಹಾಗೂ ರೆಡ್ ವೈನ್ ಕೂಡ ಸದಾ ಯುವಕರಾಗಿರಲು ನೆರವಾಗುತ್ತದೆಯಂತೆ. ಸೆಕ್ಸ್, ಪ್ರೀತಿ, ಡಾನ್ಸ್ ಎಲ್ಲವೂ ಮನುಷ್ಯನನ್ನು ಯಂಗ್ ಆಗಿರುವಂತೆ ನೋಡಿಕೊಳ್ಳುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.