alex Certify ಕೊರೋನಾ ಕುರಿತಾದ ಶಾಕಿಂಗ್ ನ್ಯೂಸ್: ಆಯಸ್ಸು ಇಳಿಕೆ – ಕೂದಲು, ಧ್ವನಿ ಕಳೆದುಕೊಳ್ಳುವ ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಕುರಿತಾದ ಶಾಕಿಂಗ್ ನ್ಯೂಸ್: ಆಯಸ್ಸು ಇಳಿಕೆ – ಕೂದಲು, ಧ್ವನಿ ಕಳೆದುಕೊಳ್ಳುವ ಆತಂಕ

ಕೊರೊನಾ ಸೋಂಕು ಕುರಿತಾದ ಆತಂಕದ ಮಾಹಿತಿ ವರದಿಯಾಗಿವೆ. ಕೊರೋನಾ ಇನ್ನೂ ಕಡಿಮೆಯಾಗಿಲ್ಲ. ಕೊರೊನಾದಿಂದ ಗುಣಮುಖರಾದವರಲ್ಲಿ ಧ್ವನಿ ಕಳೆದುಕೊಳ್ಳುವ ಸಮಸ್ಯೆ ಎದುರಾಗಿದೆ.

ಕೊಲ್ಕತ್ತಾದಲ್ಲಿ ಕೊರೋನಾದಿಂದ ಗುಣಮುಖರಾದ ಕೆಲವರಿಗೆ ಮಾತನಾಡಲು ಆಗುತ್ತಿಲ್ಲ. ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ಇದು ತಾತ್ಕಾಲಿಕ ಸಮಸ್ಯೆಯಾಗಿದೆ. ಜನರು ಆತಂಕಪಡುವುದು ಬೇಡ. ಮೂರು ವಾರದ ನಂತರ ಧ್ವನಿ ಸರಿಯಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.

ಸಿಎಂಆರ್ಐ ಆಸ್ಪತ್ರೆಯ ಶ್ವಾಸಕೋಶ ವಿಭಾಗದ ನಿರ್ದೇಶಕರಾದ ರಾಜಾಧರ್ ಅವರು, ಕೊರೋನಾದಿಂದ ಗುಣಮುಖರಾದ ಕೆಲವರಲ್ಲಿ ಧ್ವನಿ ಕಳೆದುಕೊಳ್ಳುವ ಆತಂಕ ಮೂಡಿದೆ. ಇದು ಸಾಮಾನ್ಯವಾಗಿದ್ದು, ಮೂರು ವಾರಗಳ ನಂತರ ಸರಿಯಾಗಲಿದೆ ಎಂದು ಹೇಳಿದ್ದಾರೆ.

ಉತ್ತರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೊರೊನಾದಿಂದ ಗುಣಮುಖರಾದವರ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಂಡಿದೆ. ಇದು ಕೂಡ ತಾತ್ಕಾಲಿಕ ಸಮಸ್ಯೆಯಾಗಿದ್ದು ನಂತರ ಸರಿಯಾಗಲಿದೆ ಎಂದು ಹೇಳಲಾಗಿದೆ.

ಇನ್ನು ಕೊರೋನಾ ಸಾಮಾನ್ಯ ಜೀವಿತಾವಧಿಯನ್ನು ಕಡಿತ ಮಾಡಿದೆ ಎಂದು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಗೊತ್ತಾಗಿದೆ. ಎರಡನೇ ಮಹಾಯುದ್ಧದ ನಂತರದಲ್ಲಿ ಕೊರೋನಾ ಮನುಷ್ಯರ ಆಯಸ್ಸು ಕಡಿತ ಮಾಡಿದೆ.

29 ದೇಶಗಳನ್ನು ಅಧ್ಯಯನ ವಿಶ್ಲೇಷಣೆಗೆ ಒಳಪಡಿಸಲಾಗಿದೆ. 2019 ಕ್ಕೆ ಹೋಲಿಸಿದರೆ ಆಯಸ್ಸು ಆರು ತಿಂಗಳು ಕಡಿಮೆಯಾಗಿದೆ. ಕೊರೋನಾದಿಂದ ವಿಶ್ವದಲ್ಲಿ ಇದುವರೆಗೆ 50 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಜೀವಿತಾವಧಿ ಕಡಿಮೆಯಾಗಿರುವುದಕ್ಕೂ ಕೊರೋನಾಗೂ ಸಂಪರ್ಕವಿದೆ ಎಂದು ಹೇಳಲಾಗಿದೆ.

ಇಂಟರ್ನ್ಯಾಷನಲ್ ಜರ್ನಲ್ ಆಫ್ ಎಪಿಡೆಮಾಲಜಿಯಲ್ಲಿ ಪ್ರಕಟವಾದ ಅಧ್ಯಯನ ವರದಿಯ ಸಹ ಲೇಖಕಿ ಡಾ. ರಿಧಿ ಕಶ್ಯಪ್ ಅವರು, ಜೀವಿತಾವಧಿ ಕಡಿಮೆಯಾಗಲು ಕೊರೋನಾ ಕಾರಣವೆನ್ನುವುದು ಆಘಾತಕಾರಿ ವಿಷಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...