alex Certify ಬಾವಲಿ ಮಾತ್ರವಲ್ಲ ಈ ಎಲ್ಲಾ ಜೀವಿಗಳು ಮನೆಯೊಳಗೆ ಬಂದರೆ ಅದು ಕೆಟ್ಟ ಶಕುನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾವಲಿ ಮಾತ್ರವಲ್ಲ ಈ ಎಲ್ಲಾ ಜೀವಿಗಳು ಮನೆಯೊಳಗೆ ಬಂದರೆ ಅದು ಕೆಟ್ಟ ಶಕುನ

ಸಾಮಾನ್ಯವಾಗಿ ಒಳ್ಳೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಶುಭ ಶಕುನವಾಗಲಿ ಎಂದೇ ಎಲ್ಲರೂ ಬಯಸುತ್ತಾರೆ. ಅಶುಭ ಶಕುನ ಕಂಡರೆ ಆ ಕೆಲಸ ಯಶಸ್ವಿಯಾಗುವುದಿಲ್ಲ ಎಂಬ ನಂಬಿಕೆಯಿದೆ. ಶುಭಶಕುನ ಸಿಕ್ಕರೆ ಮನಸ್ಸು ಸಂತಸ ಮತ್ತು ಸಮಾಧಾನದಿಂದಿರುತ್ತದೆ. ದಿನನಿತ್ಯದ ಜೀವನದಲ್ಲಿ ಇಂತಹ ಅನೇಕ ಘಟನೆಗಳು ನಡೆಯುತ್ತವೆ. ಜ್ಯೋತಿಷ್ಯದಲ್ಲಿ ಶಕುನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.

ಕೆಟ್ಟ ಶಕುನದ ಸಂಕೇತಗಳು…

ಬೆಕ್ಕುಗಳ ಕಾದಾಟ: ಮನೆಯಲ್ಲಿ ಬೆಕ್ಕುಗಳ ಕಾದಾಟವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಕುಟುಂಬದಲ್ಲಿ ಜಗಳಗಳನ್ನು ಸೂಚಿಸುತ್ತದೆ.

ಗೂಬೆಯ ಸದ್ದು : ಮನೆಯ ಮೇಲ್ಛಾವಣಿಯ ಮೇಲೆ ಗೂಬೆ ಬಂದು ಕುಳಿತು ಸದ್ದು ಮಾಡಿದರೆ ಮನೆಯಲ್ಲಿ ದಿಢೀರ್ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ.

ಅಗೆಯುವಾಗ ಸತ್ತ ಜೀವಿ ಪತ್ತೆ: ನೆಲವನ್ನು ಅಗೆಯುವಾಗ ಹಾವಿನಂತಹ ಸತ್ತ ಜೀವಿ ಕಂಡುಬಂದರೆ, ಅದು ಮುಂಬರುವ ಕೆಟ್ಟ ದಿನಗಳನ್ನು ಸೂಚಿಸುತ್ತದೆ.

ಹಾಲು ಚೆಲ್ಲುವುದು: ಮನೆಯಲ್ಲಿ ಪದೇ ಪದೇ ಹಾಲು ನೆಲದ ಮೇಲೆ ಚೆಲ್ಲುವುದು ಕೂಡ ಶುಭ ಶಕುನವಲ್ಲ. ಈ ರೀತಿ ಆದರೆ ಅದು ಮನೆಯಲ್ಲಿ ಯಾತನೆ ಮತ್ತು ವಿವಾದದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.

ಮನೆಗೆ ಬಾವಲಿಗಳ ಆಗಮನ: ಮನೆಗೆ ಬಾವಲಿಗಳ ಆಗಮನ ಅಥವಾ ಅವು ಮನೆಯಲ್ಲಿ ಉಳಿಯುವುದು ಶುಭವಲ್ಲ. ಇದು ಭವಿಷ್ಯದಲ್ಲಿ ದೊಡ್ಡ ಅಪಘಾತದ ಸಂಕೇತವಾಗಿದೆ.

ಇಲಿಗಳ ಸಂಖ್ಯೆ ಹೆಚ್ಚಳ: ಮನೆಯಲ್ಲಿ ದಿಢೀರ್ ಇಲಿಗಳ ಕಾಟ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಅನಾಹುತಗಳು ಸಂಭವಿಸುವುದು ಖಚಿತ. ಇದನ್ನು ನಿವಾರಿಸಲು ಗಣೇಶನಿಗೆ ಲಾಡು ಅರ್ಪಿಸಿ.

ದೇವರ ವಿಗ್ರಹ ಭಗ್ನ: ಮನೆಯಲ್ಲಿ ದೇವರ ವಿಗ್ರಹ ಅಥವಾ ಚಿತ್ರ ಒಡೆದರೆ ಅದು ನಕಾರಾತ್ಮಕತೆ ಮತ್ತು ರೋಗವನ್ನು ತರುತ್ತದೆ. ಒಡೆದ ವಿಗ್ರಹ ಅಥವಾ ಚಿತ್ರವನ್ನು ತಕ್ಷಣವೇ ಗಂಗೆಯಲ್ಲಿ ತೇಲಿಸಿಬಿಡಿ. ಮಂಗಳಕರ ದಿನದಂದು ಹೊಸದನ್ನು ಖರೀದಿಸಿ.

ನಾಯಿ ಅಳುವುದು: ನಾಯಿಯು ಮನೆಯ ಗೇಟ್‌ಗೆ ಎದುರಾಗಿ ಅಳುತ್ತಿದ್ದರೆ ಅದು ಕೂಡ ಅಶುಭದ ಸಂಕೇತ. ಮನೆಯಲ್ಲಿ ಕೆಲವು ಸಮಸ್ಯೆ ಮತ್ತು ಕುಟುಂಬದಿಂದ ಕೆಟ್ಟ ಸುದ್ದಿಯನ್ನು ಸೂಚಿಸುತ್ತದೆ.

ಗಾಯಗೊಂಡ ಹಕ್ಕಿಯ ಆಗಮನ: ಗಾಯಗೊಂಡ ಹಕ್ಕಿ ಮನೆಯೊಳಗೆ ಬಂದರೆ ಅದು ದೊಡ್ಡ ತೊಂದರೆಯ ಸಂಕೇತವಾಗಿದೆ.

ಗೆದ್ದಲು ಅಥವಾ ಜೇನುಗೂಡುಗಳ ಉಪಸ್ಥಿತಿ: ಮನೆಯಲ್ಲಿ ಗೆದ್ದಲು ಅಥವಾ ಜೇನುಗೂಡುಗಳಿದ್ದರೆ ಮನೆಯ ಯಜಮಾನನ ಆರೋಗ್ಯ ಹದಗೆಡುವ ಸಾಧ್ಯತೆ ಇದೆ.

ದಾರಿ ದಾಟಿದ ಬೆಕ್ಕು: ಕೆಲಸಕ್ಕೆ ಹೋಗುವಾಗ ಬೆಕ್ಕು ಅಡ್ಡ ಬಂದರೆ ಅದರಲ್ಲಿ ವಿಫಲವಾಗುವ ಸಂಭವವಿದೆ. ಹಾಗಾಗಿ ವಾಪಸ್‌ ಮನೆಗೆ ಬಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮುಂದುವರಿಯಿರಿ.

ಕೆಂಪು ಇರುವೆಗಳ ಆಗಮನ: ಮನೆಗೆ ಕೆಂಪು ಇರುವೆಗಳ ಆಗಮನವು ಭಾರೀ ಆರ್ಥಿಕ ನಷ್ಟವನ್ನು ಸೂಚಿಸುತ್ತದೆ.

ಪಾದದಿಂದ ಶೂ ಬೀಳುವುದು : ಪ್ರಯಾಣಕ್ಕೆ ಹೋಗುವಾಗ ಪಾದದಿಂದ ಶೂ ಬಿದ್ದರೆ ಅದು ಅಶುಭ ಸಂಕೇತ. ಅಂತಹ ಪರಿಸ್ಥಿತಿಯಲ್ಲಿ ತೀರಾ ಅಗತ್ಯವಿಲ್ಲದಿದ್ದರೆ ಪ್ರಯಾಣವನ್ನು ಮುಂದೂಡುವುದು ಉತ್ತಮ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...