
ತ್ರಿ ವಿಕ್ರಂ ಶ್ರೀನಿವಾಸ್ ನಿರ್ದೇಶನದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ‘ಜಲ್ಸಾ’ ತೆರೆ ಮೇಲೆ ಬಂದು ಇಂದಿಗೆ 16 ವರ್ಷಗಳಾಗಿವೆ. ಈ ಸಂತಸವನ್ನು ಚಿತ್ರತಂಡ ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. 2008 ಏಪ್ರಿಲ್ 2 ರಂದು ತೆರೆ ಕಂಡಿದ್ದ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು.
ಆಕ್ಷನ್ ಕಾಮಿಡಿ ಕಥಾಧಾರಿತ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಅವರಿಗೆ ಜೋಡಿಯಾಗಿ ಇಲಿಯಾನ ಅಭಿನಯಿಸಿದ್ದು, ಪ್ರಕಾಶ್ ರಾಜ್, ಬ್ರಹ್ಮಾನಂದಂ, ಸುನಿಲ್, ಮುಕೇಶ್ ರಿಷಿ, ರವಿವರ್ಮ, ಸತ್ಯಂ ರಾಜೇಶ್, ಭರತ್ ರೆಡ್ಡಿ, ಪಾರ್ವತಿ ಮೆಲ್ಟನ್ ತಾರಾ ಬಳಗದಲ್ಲಿದ್ದಾರೆ. ಅಲ್ಲು ಅರವಿಂದ್ ನಿರ್ಮಾಣ ಮಾಡಿದ್ದು, ಶ್ರೀ ಕಾರ್ ಪ್ರಸಾದ್ ಸಂಕಲನವಿದೆ. ಇನ್ನುಳಿದಂತೆ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.