
ಬೆಂಗಳೂರು: ಬೆಂಗಳೂರಿನಲ್ಲಿ ನಿವೃತ್ತ ಐಟಿ ಉದ್ಯೋಗಿ ಕೊಲೆ ಮಾಡಲಾಗಿದೆ. ವೆಂಕಟೇಶ್ ಕೊಲೆಯಾದವರು ಎಂದು ಹೇಳಲಾಗಿದೆ.
ಜೆಪಿ ನಗರದ 28ನೇ ಕ್ರಾಸ್ ಮನೆಯಲ್ಲಿ ವೆಂಕಟೇಶ್ ಅವರನ್ನು ಹತ್ಯೆ ಮಾಡಲಾಗಿದೆ. ದಂಪತಿ ಮನೆಯಲ್ಲಿದ್ದ ವೇಳೆ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪರಿಚಯಸ್ಥರೇ ವೆಂಕಟೇಶ್ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಜೆಪಿ ನಗರ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.