ಶಿವಮೊಗ್ಗ : ನಾನು ಡಿ.ಕೆ ಸುರೇಶ್ ಅವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳಿಲ್ಲ, ಕಾನೂನು ಬೇಕು ಅಂದೆ ಅಷ್ಟೇ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದರು.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಂಸದ ಡಿಕೆ ಸುರೇಶ್ ಅವರ ಮೇಲೆ ನನಗೆ ಯಾವ ದ್ವೇಷ ಇಲ್ಲ, ನಾನು ಡಿ.ಕೆ ಸುರೇಶ್ ಅವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳಿಲ್ಲ, ಕಾನೂನು ಬೇಕು ಅಂದೆ ಅಷ್ಟೇ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದರು. ನಾನು ನಿಮ್ಮನ್ನು ಗುಂಡಿಕ್ಕಿ ಕೊಲ್ಲಿ ಅಂತಾ ಹೇಳಿಲ್ಲ, ಹೇಳೋಲ್ಲ. ನಾನು ಹೊಸ ಕಾನೂನು ತನ್ನಿ ಎಂದು ಹೇಳಿರುವುದು ಹೌದುʼʼ ಎಂದು ಹೇಳಿದ್ದಾರೆ.
ಸುರೇಶ್ ಹೇಳಿಕೆಗೆ ನನ್ನ ವಿರೋಧ ಅಷ್ಟೇ. ಅವರ ಮೇಲೆ ವೈಯಕ್ತಿಕ ದ್ವೇಷ ಇಲ್ಲ . . ದೇಶದ ವಿಭಜನೆ ಮಾತಾನಾಡಿರುವುದು ಸರಿಯಲ್ಲ. ಇದು ರಾಷ್ಟದ್ರೋಹ ಹೇಳಿಕೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಕ್ರಮ ತೆಗೆದುಕೊಳ್ಳಬೇಕು ಎಂದರು.