ಬೆಂಗಳೂರು: ಬಿಬಿಎಂಪಿ ಬದಲು ಐಟಿ, ಬಿಟಿ ಕಾರಿಡಾರ್ ಪ್ರತ್ಯೇಕ ಮುನ್ಸಿಪಲ್ ವಲಯವೆಂದು ಘೋಷಿಸಲು ಕಂಪನಿಗಳಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಪ್ರತ್ಯೇಕ ಮುನ್ಸಿಪಲ್ ವಲಯ ನೀಡಬೇಕೆಂದು ಐಟಿ ಕಂಪನಿಗಳು ಸರ್ಕಾರಕ್ಕೆ ಪತ್ರ ಬರೆದಿವೆ. ನಮಗೆ ಬಿಬಿಎಂಪಿ ಬೇಡ, ಪ್ರತ್ಯೇಕ ಪಾಲಿಕೆಯನ್ನು ಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಐಟಿ, ಬಿಟಿ ಕಂಪನಿಗಳಿಂದ ಪತ್ರ ಬರೆಯಲಾಗಿದೆ.
ಐಟಿ ಕಂಪನಿಗಳು ಇರುವ ಪ್ರದೇಶವನ್ನು ಬಿಬಿಎಂಪಿ ಅಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದೆ. ಹೊರ ವರ್ತುಲ ರಸ್ತೆ, ಸುತ್ತಮುತ್ತಲ ಪ್ರದೇಶವನ್ನು ಪ್ರತ್ಯೇಕ ಮುನ್ಸಿಪಲ್ ವಲಯವೆಂದು ಘೋಷಿಸಲು ಮನವಿ ಮಾಡಲಾಗಿದೆ. ಕಂಪನಿಗಳ ಸಂಘದಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇತ್ತೀಚೆಗೆ ಮಳೆಯಿಂದಾಗಿ ಐಟಿ ಕಂಪನಿಗಳಿಗೆ ನೀರು ನುಗ್ಗಿತ್ತು. ಐಟಿ, ಬಿಟಿ ಕಂಪನಿಗಳು ಕೇಂದ್ರೀಕೃತವಾಗಿರುವ ಹೊರವರ್ತುಲ ರಸ್ತೆ ಮತ್ತು ಸುತ್ತಲಿನ ಪ್ರದೇಶವನ್ನು ಪ್ರತ್ಯೇಕ ಮುನ್ಸಿಪಲ್ ವಲಯವೆಂದು ಘೋಷಿಸಬೇಕು ಎಂದು ಪತ್ರ ಬರೆಯಲಾಗಿದೆ.