ಭಾರತದಲ್ಲಿಯೇ ಉತ್ಪಾದನೆ ಮಾಡಿ ಮಾರಾಟ ಮಾಡುವ ಜಪಾನ್ನ ಇಸುಜು ಪಿಕಪ್ ವಾಹನ ತಯಾರಿಕಾ ಕಂಪನಿಯು ಪಿಕಪ್ ವಾಹನಗಳ ಬೆಲೆಯನ್ನು ಎರಡು ಲಕ್ಷ ರೂ.ವರೆಗೆ ಏರಿಕೆ ಮಾಡಿದೆ. ಇದರಿಂದ ಇಸುಜು ಪಿಕಪ್ ವಾಹನಗಳ ಖರೀದಿದಾರರ ಜೇಬಿಗೆ ಭಾರಿ ಪ್ರಮಾಣದಲ್ಲಿ ಹೊರೆಯಾಗಲಿದೆ.
ಭಾರತದಲ್ಲಿ ಇಸುಜು ಎಂಯು-ಎಕ್ಸ್ ಹಾಗೂ ಇಸುಜು ಡಿ-ಮ್ಯಾಕ್ಸ್ ಮಾದರಿಯ ವಾಹನಗಳನ್ನು ಮಾತ್ರ ಉತ್ಪಾದಿಸಲಾಗುತ್ತದೆ. ಆದಾಗ್ಯೂ, ಇಸುಜು ವಿ-ಕ್ರಾಸ್ ವಾಹನವು ಡಿ-ಮ್ಯಾಕ್ಸ್ನ ಮತ್ತೊಂದು ರೂಪಾಂತರಿ ವಾಹನವಾಗಿದೆ. ಇವುಗಳಲ್ಲೇ ಹೈ-ಲ್ಯಾಂಡರ್, ವಿ ಕ್ರಾಸ್ ಝಡ್ 4/7, ವಿ ಕ್ರಾಸ್ ಝಡ್ 4/4 ಎಂಟಿ ಸೇರಿ ಹಲವು ಮಾದರಿಯ ವಾಹನಗಳಿವೆ.
ಕ್ಯಾಮೊಮೈಲ್ ಕೃಷಿ ಮಾಡಿ ಗಳಿಸಿ ವಾರ್ಷಿಕ 2.5 ಲಕ್ಷ ರೂಪಾಯಿ ಲಾಭ..!
ಈ ವಾಹನಗಳಲ್ಲಿಯೇ ಇಸುಜು ಡಿ-ಮ್ಯಾಕ್ಸ್ ಹೈ ಲ್ಯಾಂಡರ್ ವಾಹನದ ಬೆಲೆಯನ್ನು ಕಂಪನಿಯು ಏಕಾಏಕಿ ಎರಡು ಲಕ್ಷ ರೂ.ವರೆಗೆ ಏರಿಕೆ ಮಾಡಿದೆ. ಈಗ ಒಟ್ಟಾರೆಯಾಗಿ ಡಿ-ಮ್ಯಾಕ್ಸ್ ಹೈ ಲ್ಯಾಡರ್ ವಾಹನದ ಬೆಲೆಯು 19.02 ಲಕ್ಷ ರೂ.ಗೆ ಏರಿಕೆಯಾಗಿದೆ. ಇದರಿಂದ ಗ್ರಾಹಕರು ಹೆಚ್ಚಿನ ಹಣ ಕೊಟ್ಟು ವಾಹನ ಖರೀದಿಸುವಂತಾಗಿದೆ.
ಅದೇ ರೀತಿ, ವಿ ಕ್ರಾಸ್ ಝಡ್ 4/2 ವಾಹನದ ಬೆಲೆಯನ್ನು 2.09 ಲಕ್ಷ ರೂ., ವಿ ಕ್ರಾಸ್ ಝಡ್ 4/4 ವಾಹನದ ಬೆಲೆಯನ್ನು 1.09 ಲಕ್ಷ ರೂ., ವಿ ಕ್ರಾಸ್ ಝಡ್ ಪ್ರೆಸ್ಟೀಜ್ 4/4 ವಾಹನದ ಬೆಲೆಯನ್ನು 1.1 ಲಕ್ಷ ರೂ. ಹೆಚ್ಚಿಸಲಾಗಿದೆ. ಕೊರೊನಾ ಬಿಕ್ಕಟ್ಟಿನಿಂದಾಗಿ ಇಸುಜು ವಾಹನಗಳ ಮಾರಾಟ ಕುಸಿದ ಕಾರಣ ಈಗ ಕಳೆದ ವರ್ಷದ ನಷ್ಟ ತುಂಬಿಸಲು ಏಕಾಏಕಿ ಬೆಲೆ ಏರಿಸಿದೆ ಎಂದು ತಿಳಿದು ಬಂದಿದೆ.