ಬೋಜಿ ಹೆಸರಿನ ಈ ಬೀದಿ ನಾಯಿಯು ಇಸ್ತಾಂಬುಲ್‌ನ ಬಸ್ಸುಗಳು, ಮೆಟ್ರೋ ರೈಲುಗಳು ಹಾಗೂ ಫೆರ‍್ರಿಗಳ ಪ್ರಯಾಣಿಕರಿಗೆ ಚಿರಪರಿಚಿತ. ಸಾರ್ವಜನಿಕ ಸಾರಿಗೆಗಳಲ್ಲಿ ಕಿಟಕಿ ಪಕ್ಕ ಕುಳಿತುಕೊಂಡು ಆಚೆ ನೋಡುವುದು ಬೋಜಿಗೆ ಬಲು ಮೆಚ್ಚಿನ ಕೆಲಸ.
ಪ್ರತಿನಿತ್ಯ 29 ಮೆಟ್ರೋ ನಿಲ್ದಾಣಗಳನ್ನು ಹಾದು ಬರುವ ಬೋಜಿ ಏನಿಲ್ಲವೆಂದರೂ ದಿನವೊಂದರಲ್ಲಿ 30 ಕಿಮೀ ಕ್ರಮಿಸುತ್ತಾನಂತೆ!
ಸ್ನೇಹಿತರೊಂದಿಗೆ ಸೇರಿ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನನ್ನು ಹೊಡೆದು ಕೊಂದ ಕಿಡಿಗೇಡಿ
ಅಂತರ್ಜಾಲದಲ್ಲಿ ಫೇಮಸ್ ಆದ ಬಳಿಕ ಬೋಜಿಯ ಪಯಣದ ಹಾದಿಯನ್ನು ಟ್ರ‍್ಯಾಕ್ ಮಾಡಲು ಇಸ್ತಾಂಬುಲ್ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಆ ವೇಳೆ ಈತ 29 ಮೆಟ್ರೋ ನಿಲ್ದಾಣಗಳನ್ನು ಹಾದು ಬಂದಿದ್ದು ಒಮ್ಮೆ ಸಮುದ್ರದ ಬಳಿಯೂ ಹೋಗಿ ಬಂದಿದ್ದಾನೆಂದು ಗೊತ್ತಾಗಿದೆ.
ಟ್ರಾಮ್ ಲೈನ್‌ಗಳನ್ನು ಇಷ್ಟ ಪಡುವ ಬೋಜಿ ಸಾಮಾನ್ಯವಾಗಿ ಸಬ್‌ವೇಗಳ ಮೂಲಕ ಸಂಚರಿಸುತ್ತಾನೆ. ಟರ್ಕಿಶ್ ಭಾಷೆಯಲ್ಲಿ ಸಬ್‌ವೇ ಗಾಡಿಯ ಮಧ್ಯ ಭಾಗವನ್ನು ಬೋಜಿ ಎನ್ನುತ್ತಾರೆ. ಇದರಿಂದಲೇ ಈ ನಾಯಿಗೆ ಈ ಹೆಸರು ಬಂದಿದೆ. ಇಸ್ತಂಬುಲ್ ಪಾಲಿಕೆಯು ಬೋಜಿಯ ಹೆಸರಲ್ಲಿ ಇನ್‌ಸ್ಟಾಗ್ರಾಂ, ಟ್ವಿಟರ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಸೃಷ್ಟಿಸಿದ್ದಾರೆ.