ಎಸ್ಬಿಐ ಗ್ರಾಹಕರಿಗೆ ಮಹತ್ವದ ಸುದ್ದಿ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತನ್ನ ಗ್ರಾಹಕರಿಗೆ ಕಾಂಟೆಕ್ಟ್ಲೆಸ್ ಸೇವೆಯನ್ನು ಆರಂಭಿಸಿದೆ. ಇದ್ರ ಮೂಲಕ ಬಳಕೆದಾರರು ಮನೆಯಲ್ಲಿ ಕುಳಿತುಕೊಂಡೆ ಫೋನ್‌ನಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಕೆಲಸ ಮಾಡಬಹುದು. ಬ್ಯಾಂಕ್ ಈ ಸೇವೆಗಾಗಿ ಎರಡು ಫೋನ್ ಸಂಖ್ಯೆಯನ್ನು ನೀಡಿದೆ. ಈ ಬಗ್ಗೆ ಬ್ಯಾಂಕ್ ಟ್ವೀಟ್ ಮಾಡಿದೆ.
ಬ್ಯಾಂಕ್, ಗ್ರಾಹಕರ ಅನುಕೂಲಕ್ಕಾಗಿ ಟೋಲ್ ಫ್ರೀ ಸಂಖ್ಯೆಗಳನ್ನು ನೀಡಿದೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂದು ಬ್ಯಾಂಕ್ ಟ್ವೀಟ್ ಮಾಡಿದೆ. ಟೋಲ್ ಫ್ರೀ ಸಂಖ್ಯೆ 1800 112 211 ಅಥವಾ 1800 425 3800 ಗೆ ಕರೆ ಮಾಡಿ ಎಂದು ಬ್ಯಾಂಕ್ ಹೇಳಿದೆ.
ಎಸ್ಬಿಐ ತನ್ನ ಟ್ವೀಟ್ ಜೊತೆಗೆ ಒಂದು ವಿಡಿಯೋವನ್ನು ಕೂಡ ಬಿಡುಗಡೆ ಮಾಡಿದೆ. ಇದರಲ್ಲಿ ಈ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ, ಮನೆಯಲ್ಲಿ ಕುಳಿತು ಗ್ರಾಹಕರು ಯಾವ ಸೇವೆಗಳನ್ನು ಪಡೆಯಬಹುದು ಎಂದು ತಿಳಿಸಲಾಗಿದೆ.
ವೀಡಿಯೊ ಪ್ರಕಾರ, ಖಾತೆ ಬ್ಯಾಲೆನ್ಸ್ ತಿಳಿಯಲು ಮತ್ತು ಕೊನೆಯ 5 ವಹಿವಾಟು ತಿಳಿಯಲು ಈ ಟೋಲ್ ಫ್ರೀ ಸಂಖ್ಯೆಗಳಿಗೆ ಕರೆ ಮಾಡಬಹುದು. ಎಟಿಎಂ ಸ್ವಿಚ್ ಆನ್ ಅಥವಾ ಆಫ್ ಮಾಡಲು, ಎಟಿಎಂ ಪಿನ್ ಅಥವಾ ಗ್ರೀನ್ ಪಿನ್ ರಚಿಸಿ, ಹೊಸ ಎಟಿಎಂಗೆ ಅರ್ಜಿ ಸಲ್ಲಿಸಲು ಇದನ್ನು ಬಳಸಬಹುದು.