ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹೊಸ ಇತಿಹಾಸ ನಿರ್ಮಿಸಿದೆ. ಇದೇ ಮೊದಲ ಬಾರಿಗೆ ಸ್ಮಾಲ್ ಸೆಟಲೈಟ್ ಲಾಂಚ್ ವೆಹಿಕಲ್ ರಾಕೆಟ್ ಉಡಾವಣೆ ಮಾಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಒಂದು ಪರಿವೀಕ್ಷಣಾ ಉಪಗೃಹ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ದೇಶದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮಕ್ಕಳು ತಯಾರಿಸಿದ ಆಜಾದಿ ಸ್ಯಾಟ್ ಉಪಗ್ರಹವನ್ನು ಸ್ಮಾಲ್ ಸೆಟಲೈಟ್ ಲಾಂಚ್ ವೆಹಿಕಲ್ ರಾಕೆಟ್ ನಭಕ್ಕೆ ಹೊತ್ತೊಯ್ದಿದೆ.
75 ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ತಯಾರಿಸಿದ 8 ಕೆಜಿ ತೂಕದ ಆಜಾದಿ ಸ್ಯಾಟ್ ಉಪಗ್ರಹವನ್ನು ಕಕ್ಷೆಗೆ ತಲುಪಿಸಲಾಗಿದೆ. ಇದರೊಂದಿಗೆ ವಿಶ್ವದ ಚಿಕ್ಕ ರಾಕೆಟ್ ಗಳ ಮಾರುಕಟ್ಟೆಗೆ ಇಸ್ರೋ ಎಂಟ್ರಿಕೊಟ್ಟಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ SSLV-D1 ಹೊತ್ತ ಭೂ ವೀಕ್ಷಣಾ ಉಪಗ್ರಹ(EOS-02) ಮತ್ತು ವಿದ್ಯಾರ್ಥಿ ನಿರ್ಮಿತ ಉಪಗ್ರಹ-AzaadiSAT ಉಡಾವಣೆ ಮಾಡಿದೆ.