ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಅತ್ಯಾಧುನಿಕ ಜಿಯೋ – ಇಮೇಜಿಂಗ್ ಉಪಗ್ರಹ ಇಒಎಸ್ -03 ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.
ಬೆಳಗ್ಗೆ 5.43 ಕ್ಕೆ ಉಪಗ್ರಹವನ್ನು ಹೊತ್ತ ಜಿಎಸ್ಎಲ್ವಿ ರಾಕೆಟ್ ಜಿಗಿದಿದೆ. ಇದು 2021 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಎರಡನೇ ಉಪಗ್ರಹ ಉಡ್ಡಯನವಾಗಿದೆ. ನಿಗದಿಯಂತೆ ಜೆಎಸ್ಎಲ್ಪಿ -ಎಫ್ 10 ರಾಕೆಟ್ ನಭಕ್ಕೆ ಜಿಗಿದಿದೆ.
ಇಸ್ರೋ ಈ ಬಗ್ಗೆ ಮಾಹಿತಿ ನೀಡಿ, ಉಡಾವಣೆ ಇಂದು 5.43 ಕ್ಕೆ ನಡೆದಿದೆ ಮೊದಲ ಮತ್ತು ಎರಡನೇ ಹಂತಗಳ ಕಾರ್ಯಕ್ಷಮತೆ ಸಾಮಾನ್ಯವಾಗಿದೆ ಎಂದು ತಿಳಿಸಿದೆ. ಭಾರತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಎರಡು ದಿನಗಳ ಮೊದಲು ಉಪಗ್ರಹ ಉಡಾವಣೆ ಮಾಡಿರುವುದು ಮಹತ್ವದ ಬೆಳವಣಿಗೆಯಾಗಿದೆ.