ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ. ಮಹತ್ವಾಕಾಂಕ್ಷಿಯ ಮಾನವ ಸಹಿತ ಬಾಹ್ಯಾಕಾಶ ಯಾತ್ರೆಗೆ ಇಸ್ರೋ ಸಿದ್ಧತೆ ಕೈಗೊಂಡಿದೆ.
ಬಾಹ್ಯಾಕಾಶಕ್ಕೆ ಮಾನವನನ್ನು ಕರೆದೊಯ್ಯುವ ರಾಕೆಟ್ ಸಜ್ಜಾಗಿದೆ. ಗಗನಯಾನದ ಕ್ರಯೋಜೆನಿಕ್ ಇಂಜಿನ್ ಮಾನವರನ್ನು ಹೊತ್ತಯ್ಯಬಲ್ಲ ಮಟ್ಟದ ಸಾಮರ್ಥ್ಯ ಪಡೆದಿದೆ ಎಂದು ಇಸ್ರೋ ತಿಳಿಸಿದೆ.
ಅತ್ಯಂತ ಕಟ್ಟುನಿಟ್ಟಾಗಿ ನಡೆಸಲಾದ ಪ್ರಯೋಗಗಳು ಇಂಜಿನ್ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. LVM-3, ಜೆನ್ -1 ರಾಕೆಟ್ ಮೂಲಕ ಮಾನವ ಸಹಿತ ಗಗನಯಾನ ಕೈಗೊಳ್ಳಲಿದ್ದು, ಸಿಇ-20 ಇಂಜಿನ್ ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ.
ವ್ಯಾಕ್ಯೂಮ್ ಇಗ್ನೀಷನ್ ಗೆ ಫೆಬ್ರವರಿ 13ರಂದು 7ನೇ ಸುತ್ತಿನ ಪ್ರಯೋಗ ಕೈಗೊಳ್ಳಲಾಗಿತ್ತು. ಮಾನವ ಸಹಿತ ಗಗನಯನ ಕೈಗೊಳ್ಳಲು ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಿರುವುದಾಗಿ ಇಸ್ರೋ ಮಾಹಿತಿ ನೀಡಿದೆ.