ಇಸ್ರೇಲ್ ನ ಕ್ಯಾಂಡಿರು ಕಂಪನಿಯಿಂದ ಸರ್ಕಾರಗಳಿಗೆ ರಹಸ್ಯ ಮಾಹಿತಿಯನ್ನು ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ.
ಬ್ಲಾಕ್ ಲೈವ್ಸ್ ಮ್ಯಾಟರ್ ಮತ್ತು ಆಮ್ನೆಸ್ಟಿ ವೆಬ್ಸೈಟ್ ಗೆ ಕನ್ನಹಾಕಿ ಆ ಮೂಲಕ ಆಕ್ಟಿವಿಸ್ಟ್ಸ್, ಭಿನ್ನಮತೀಯರು, ವಕೀಲರು, ಪತ್ರಕರ್ತರ ಫೋನ್, ಕಂಪ್ಯೂಟರ್ ಗೆ ಕನ್ನ ಹಾಕಿ ಮಾಹಿತಿ ಕಲೆ ಹಾಕಲಾಗಿದೆ. ಈ ಮಾಹಿತಿಯನ್ನು ಕ್ಯಾಂಡಿರು ಕಂಪನಿಯಿಂದ ಸರ್ಕಾರಗಳಿಗೆ ಮಾರಾಟ ಮಾಡಲಾಗಿದೆ ಎನ್ನುವುದು ಸಂಶೋಧನೆಯಿಂದ ಬಹಿರಂಗವಾಗಿದೆ.
ಯೂನಿವರ್ಸಿಟಿ ಆಫ್ ಟೊರೊಂಟೋದ ಸಿಟಿಜನ್ ಲ್ಯಾಬ್ ಸಂಶೋಧನೆಯಲ್ಲಿ ಮಾಹಿತಿ ಗೊತ್ತಾಗಿದ್ದು, ಆದರೆ, ಯಾವ ದೇಶಗಳಿಗೆ ರಹಸ್ಯ ಮಾಹಿತಿ ಮಾರಾಟವಾಗಿದೆ ಎಂಬುದು ಖಚಿತವಾಗಿಲ್ಲ.
ಸ್ಪೈವೇರ್ ಮೂಲಕ ಕಂಪ್ಯೂಟರಗಳ ಮಾಹಿತಿಗೆ ಕನ್ನ ಹಾಕಲಾಗಿದೆ. ಸರ್ಕಾರಗಳಿಗೆ ಹ್ಯಾಕಿಂಗ್ ಸ್ಪೈವೇರ್ ಮಾರಾಟ ಮಾಡಲಾಗಿತ್ತು. ನಂತರ ಸರ್ಕಾರಗಳಿಂದ ಟಾರ್ಗೆಟ್ ಮಾಡಬೇಕಾದ ವ್ಯಕ್ತಿ ಫೋನ್, ಕಂಪ್ಯೂಟರ್ ಹ್ಯಾಕಿಂಗ್ ಮಾಡಲಾಗ್ತಿತ್ತು. ಸ್ಪೈವೇರ್ ಮೂಲಕ ಮಹಿಳಾ ಹಕ್ಕುಗಳ ಕಾರ್ಯಕರ್ತರು, ವಕೀಲರು, ಪತ್ರಕರ್ತರ ಫೋನ್, ಕಂಪ್ಯೂಟರ್ ಗಳನ್ನು ಹ್ಯಾಕ್ ಮಾಡಲಾಗಿದೆ ಎನ್ನುವುದು ಗೊತ್ತಾಗಿದೆ. ಗಾರ್ಡಿಯನ್ ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ.