ಬೆಂಗಳೂರು: ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ನ ಹಮಾಸ್ ಉಗ್ರರು ದಾಳಿ ನಡೆಸಿದ್ದು, 300ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. 1700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಮಾಸ್ ಬಂಡುಕೋರರ ದಾಳಿ ಬೆನ್ನಲ್ಲೇ ಇಸ್ರೇಲ್ ಯುದ್ಧ ಘೋಷಣೆ ಮಾಡಿದೆ. ಇದರಿಂದಾಗಿ ಇಸ್ರೇಲ್ ನಲ್ಲಿ ಸಿಲುಕಿರುವ ಭಾರತೀಯರು ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡಿಗರ ಸಹಾಯಕ್ಕಾಗಿ ರಾಜ್ಯ ಸರ್ಕಾರ ಹೆಲ್ಪ್ ಲೈನ್ ನಂಬರ್ ಬಿಡುಗಡೆ ಮಾಡಿದೆ.
ಇಸ್ರೇಲ್ ನಲ್ಲಿ ಜನನಿಬಿಡ ಪ್ರದೇಶಗಳ ಮೇಲೆ ಹಮಾಸ್ ಉಗ್ರರ ರಾಕೆಟ್ ದಾಳಿ ಮುಂದುವರೆದಿದ್ದು, ಭಾರತೀಯರು ಸುರಕ್ಷಿತರಾಗಿ ಹಾಗೂ ಜಾಗರೂಕರಾಗಿರುವಂತೆ ಸೂಚಿಸಲಾಗಿದೆ. ಅಲ್ಲದೇ ದೇಶದ ಜನರು, ಕನ್ನಡಿಗರು ಸ್ಥಳೀಯ ಅಧಿಕಾರಿಗಳು ಸೂಚಿವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಭಾರತೀಯ ಪ್ರಜೆಗಳು ಅನಗತ್ಯ ಪ್ರಯಾಣಗಳನ್ನು ತಪ್ಪಿಸಿ ಹಾಗೂ ಸುರಕ್ಷತಾ ಆಶ್ರಯ (Bomb shelter) ಬಳಿ ಇರುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಸ್ರೇಲಿ ಹೋಮ್ ಫ್ರಂಟ್ ಕಮಾಂಡ್ ವೆಬ್ ಸೈಟ್ (https://www.oref.org.il/en) ಅಥವಾ ಅವರ ಸಿದ್ಧತೆ ಕರಪತ್ರವನ್ನು ನೋಡಿ. ಹೆಚ್ಚಿನ ಮಾಹಿತಿಗೆ ರಾಯಭಾರ ಕಚೇರಿ ಸಿಬ್ಬಂದಿಯನ್ನು ಸಂಪರ್ಕಿಸಬಹುದು.
ತುರ್ತು ಸಂದರ್ಭದಲ್ಲಿ +97235226748ಕ್ಕೆ ಅಥವಾ consl.telaviv@mea.gov.inನಲ್ಲಿ ಇ-ಮೇಲ್ ಸಂದೇಶ ಕಳುಹಿಸಬಹುದು.
ಇಸ್ರೇಲ್ ನಲ್ಲಿರುವ ಕನ್ನಡಿಗರು ಅಥವಾ ಭಾರತೀಯ ನಾಗರಿಕರಿಗೆ ಸಹಾಯ ಅಗತ್ಯವಿದ್ದರೆ ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಸಹಾಯವಾಣಿ ಸಂಖ್ಯೆ: 080222340676, 08022253707ಕ್ಕೆ ಸಂಪರ್ಕಿಸಬಹುದು ಎಂದು ಹೆಲ್ಪ್ ಲೈನ್ ಸಂಖ್ಯೆಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.