ವಿಶ್ವದಲ್ಲಿರುವ ಅನೇಕ ವಿಜ್ಞಾನಿಗಳು ಇಂಧನಗಳಿಗೆ ಪರ್ಯಾಯ ಮೂಲವನ್ನು ಹುಡುಕುತ್ತಾ ಇದ್ದಾರೆ. ಪೆಟ್ರೋಲ್, ಡೀಸೆಲ್ ಬಳಸದೇ ಓಡುವ ವಾಹನ, ವಿದ್ಯುತ್ ಸಹಾಯವಿಲ್ಲದೇ ತಿರುಗುವ ಫ್ಯಾನು ಹೀಗೆ ಏನೇನೋ ಆವಿಷ್ಕಾರಗಳು ನಡೆಯುತ್ತಲೇ ಇರುತ್ತೆ. ಆದರೆ ಇಲ್ಲೊಬ್ಬ ವಿಜ್ಞಾನಿ ಮಾತ್ರ ಮನುಷ್ಯನ ಮಲವನ್ನು ಬಳಸಿ ಹೊಸ ಆವಿಷ್ಕಾರ ಮಾಡಿದ್ದಾರೆ..!
ಹೌದು..! ಬೆನ್ ಗುರಿಯನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮನುಷ್ಯನ ಮಲದಿಂದ ಕಲ್ಲಿದ್ದಲು ಮಾದರಿಯ ವಸ್ತುವನ್ನು ಉತ್ಪಾದನೆ ಮಾಡಿದ್ದಾರೆ..! ಮರುಭೂಮಿ ಪ್ರದೇಶದಲ್ಲಿ ವಿಜ್ಞಾನಿಗಳು ಶೌಚಾಲಯವನ್ನು ಸ್ಥಾಪನೆ ಮಾಡಿದ್ದರು. ಇಲ್ಲಿ ಪ್ರತಿದಿನ ಒಂದಷ್ಟು ಮಂದಿ ಮಲ ವಿಸರ್ಜನೆ ಮಾಡುತ್ತಿದ್ದರು. ದಿನದ ಕೊನೆಯಲ್ಲಿ ಈ ಮಲವನ್ನು ಸಂಗ್ರಹಿಸುತ್ತಿದ್ದ ವಿಜ್ಞಾನಿಗಳು ಅದರಲ್ಲಿರುವ ಸೂಕ್ಷ್ಮ ಕೀಟಾಣುಗಳನ್ನು ನಾಶಪಡಿಸಲು ಆಟೋಕ್ಲೇವ್ನಲ್ಲಿ ಮಲವನ್ನು ಬಿಸಿ ಮಾಡುತ್ತಾರೆ. ಬಳಿಕ ಈ ಮಲವು ಪುಡಿ ರೂಪವನ್ನು ಪಡೆದುಕೊಳ್ಳುತ್ತದೆ. ಇದು ಬಳಕೆಗೆ ಯೋಗ್ಯವಾಗಿದೆ.
ಈ ಕಂದು ಬಣ್ಣದ ಪುಡಿಯನ್ನು ನೀರಿನಲ್ಲಿ ಬೆರೆಸಿ ಸಣ್ಣ ಸಣ್ಣ ಬ್ಯಾಚ್ಗಳಲ್ಲಿ ಹಾಕಲಾಗುತ್ತದೆ. ಬಳಿಕ ಇವುಗಳಲ್ಲಿ 50 ಮಿಲಿಮೀಟರ್ ಪ್ರಯೋಗಾಲಯದಲ್ಲಿ ಲೋಡ್ ಮಾಡಲಾಗುತ್ತದೆ. ಈ ರಿಯಾಕ್ಟರ್ಗಳು ಅತಿಯಾದ ಶಾಖ ಹಾಗೂ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿವೆ.
ವಿಜ್ಞಾನಿಗಳು ವಿವಿಧ ತಾಪಮಾನಗಳಲ್ಲಿ ಪ್ರಯೋಗವನ್ನು ನಡೆಸಿದ್ದಾರೆ. 180 – 240 ಡಿಗ್ರಿ ಸೆಲ್ಸಿಯಸ್ ಶಾಖದ ನಡುವೆ ಈ ಕಲ್ಲಿದ್ದಲ್ಲನ್ನು ಪರೀಕ್ಷೆ ಮಾಡಲಾಯ್ತು. ಅಂದಹಾಗೆ ಈ ಮಲದ ಪುಡಿಯನ್ನು ಶೂನ್ಯ ಆಮ್ಲಜನಕದ ಉಪಸ್ಥಿತಿಯಲ್ಲಿ ನೀರಿನೊಂದಿಗೆ ಮಿಶ್ರಣ ಮಾಡಲಾಗಿದೆ.
ಈ ಕಲ್ಲಿದ್ದಲು ಚಾಲಿತ ವಿದ್ಯುತ್ ಸ್ಥಾವರಗಳ ಕುಲುಮೆಗಳಲ್ಲಿ ಇಂಧನದಂತೆ ಇದನ್ನು ಬಳಕೆ ಮಾಡಬಹುದಾಗಿದೆ. ಕಲ್ಲಿದ್ದಲ್ಲಿನಂತಹ ದಹನ ವಸ್ತುವನ್ನು ತಯಾರಿಸುವಾಗ ಅದರಿಂದ ನೀರನ್ನು ಬೇರ್ಪಡಿಸಬೇಕು. ಆದರೆ ಈ ಕಲ್ಲಿದ್ದಲು ಸುರಕ್ಷಿತ ಸಾವಯವ ಗೊಬ್ಬರವಾಗಿದೆ.