ಇದು ತಂತ್ರಜ್ಞಾನಗಳ ಯುಗ. ಪ್ರತಿದಿನ ಹೊಸಹೊಸ ತಂತ್ರಜ್ಞಾನಗಳ ಪರಿಚಯವಾಗುತ್ತಿದೆ. ಇದೀಗ ಸುಳ್ಳು ಹೇಳುವವರನ್ನು ಥಟ್ಟನೆ ಗುರುತಿಸುವ ಲೈ-ಡಿಟೆಕ್ಟರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಮುಖದ ಸ್ನಾಯುಗಳ ಸಹಾಯದಿಂದ ಸುಳ್ಳುಗಾರರನ್ನು ಬಹುತೇಕ ನಿಖರವಾಗಿ ಕಂಡು ಹಿಡಿಯುತ್ತಿದೆ. ತಂತ್ರಜ್ಞಾನವು ಶೇಕಡಾ 73ರಷ್ಟು ನಿಖರತೆಯನ್ನು ಹೊಂದಿದೆ.
ಇಸ್ರೇಲ್‌ನ ಟೆಲ್ ಅವಿವ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಸುಳ್ಳುಗಾರರನ್ನು ಎರಡು ವರ್ಗಗಳಾಗಿ ವಿಂಗಡಿಸಿದೆ. ಮೊದಲನೆಯದು ಸುಳ್ಳು ಹೇಳುವಾಗ ಕೆನ್ನೆಯ ಸ್ನಾಯುಗಳನ್ನು ಸಕ್ರಿಯಗೊಳಿಸುವವರು ಮತ್ತು ಎರಡನೆಯದು, ಅವರು ಸುಳ್ಳು ಹೇಳಿದಾಗ ಹುಬ್ಬುಗಳ ಬಳಿ ಸ್ನಾಯುಗಳನ್ನು ಸಕ್ರಿಯಗೊಳಿಸುತ್ತಾರೆ.
ನರಗಳು ಮತ್ತು ಸ್ನಾಯುಗಳ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ಮತ್ತು ಅಳೆಯುವ ವಿದ್ಯುದ್ವಾರಗಳಿಂದ ಸಂಶೋಧನೆ ನಡೆಸಲ್ಪಡುತ್ತದೆ. ಈ ವಿದ್ಯುದ್ವಾರಗಳು ಮೃದುವಾದ ಸ್ಟಿಕ್ಕರ್‌ಗಳನ್ನು ಹೊಂದಿವೆ ಮತ್ತು ವಿವಿಧ ರೀತಿಯ ಅಪ್ಲಿಕೇಶನ್‌ಗಳನ್ನು ಕೂಡ ಹೊಂದಿವೆ. ಸ್ಟಿಕ್ಕರ್‌ಗಳನ್ನು ಕೆನ್ನೆಯ ಸ್ನಾಯುಗಳಿಗೆ ಮತ್ತು ಹುಬ್ಬುಗಳ ಮೇಲಿನ ಸ್ನಾಯುಗಳಿಗೆ ಇಡಲಾಗುತ್ತದೆ.
ಸಂಶೋಧನೆಯಲ್ಲಿ ಇಬ್ಬರನ್ನು ಬಳಸಲಾಗಿದ್ದು, ಒಬ್ಬ ವ್ಯಕ್ತಿಯ ಬಳಿ ಸುಳ್ಳು ಹೇಳಿಸಲಾಗುತ್ತದೆ. ಇದನ್ನು ಮತ್ತೊಬ್ಬ ವ್ಯಕ್ತಿ ಪತ್ತೆಹಚ್ಚಬೇಕು. ತನ್ನ ಸಂಗಾತಿ ಸುಳ್ಳು ಹೇಳುವುದನ್ನು ವ್ಯಕ್ತಿಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ, ವಿದ್ಯುದ್ವಾರಗಳು ಶೇಕಡಾ 73 ರಷ್ಟು ಅದ್ಭುತ ಯಶಸ್ಸಿನೊಂದಿಗೆ ಸುಳ್ಳನ್ನು ಪತ್ತೆಹಚ್ಚಲು ಸಮರ್ಥವಾಗಿವೆ ಎಂದು ಪರೀಕ್ಷೆಯಲ್ಲಿ ಬಹಿರಂಗಪಡಿಸಿದೆ.
ತಂತ್ರಜ್ಞಾನವು ಹೆಚ್ಚು ನಿಖರ ಮತ್ತು ಉತ್ತಮವಾಗಿರುತ್ತದೆ ಮತ್ತು ವಂಚನೆಯನ್ನು ಪತ್ತೆಹಚ್ಚುವ ಮೂಲಕ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಡೆಗಟ್ಟಲು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಸಂಶೋಧಕರು ಧನಾತ್ಮಕವಾಗಿ ಹೇಳಿದ್ದಾರೆ.