
ಗಾಝಾ : ಇಸ್ರೇಲ್-ಹಮಾಸ್ ಯುದ್ಧದ ನಡುವೆ ಉತ್ತರ ಪ್ಯಾಲೆಸ್ಟೈನ್ ನಲ್ಲಿ ಗರ್ಭಿಣಿಯೊಬ್ಬಳು ಹೆರಿಗೆ ನೋವಿನಿಂದ ಆಸ್ಪತ್ರೆಗೆ ನಡೆದು ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ಯುದ್ಧ ಪೀಡಿತ ಫೆಲೆಸ್ತೀನ್ ಪ್ರದೇಶದಲ್ಲಿ, ಇಸ್ರೇಲಿ ದಾಳಿಗಳು ನಿಲ್ಲುತ್ತಿಲ್ಲ. ಸಾಮಾನ್ಯ ಜನರು ಯುದ್ಧದಿಂದ ತತ್ತರಿಸಿ ಹೋಗಿದ್ದಾರೆ. ಇತ್ತೀಚೆಗೆ ಗರ್ಭಿಣಿ ಮಹಿಳೆಯೊಬ್ಬರು ಸುಮಾರು ಐದು ಕಿ.ಮೀ. ನಡೆದುಕೊಂಡೇ ಆಸ್ಪತ್ರೆಗೆ ತಲುಪಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಸದ್ಯ ಈ ಘಟನೆ ಪ್ರಪಂಚದಾದ್ಯಂತದ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
ಮಹಿಳೆಯ ಹೆಸರು ಎಮಾನ್ ಅಲ್-ಮಸ್ರಿ. ಇಸ್ರೇಲ್-ಹಮಾಸ್ ಯುದ್ಧದ ನಡುವೆ ಸುರಕ್ಷಿತ ಸ್ಥಳಕ್ಕಾಗಿ ಹುಡುಕುತ್ತಾ ಬೀಟ್ ಹನುನ್ನಲ್ಲಿರುವ ತನ್ನ ಮನೆಯಿಂದ ಕಾಲ್ನಡಿಗೆಯಲ್ಲಿ ಉತ್ತರ ಪ್ಯಾಲೇಸ್ಟ್ರೈನ್ ತಲುಪಿದ್ದೆ. ಆದರೆ ಹೆರಿಗೆ ನೋವಿನಿಂದ ಯಾವುದೇ ವಾಹನ ಸಿಗದ ಕಾರಣ ಕಾಲ್ನಡಿಗೆಯಲ್ಲೇ ಆಸ್ಪತ್ರೆಗೆ ಹೋಗಿ ಹೆರಿಗೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.