ಗಾಝಾ: ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ಇಸ್ರೇಲ್ ಗಾಝಾ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ. ಮಧ್ಯ ಗಾಜಾದಲ್ಲಿ ಇಸ್ರೇಲ್ ಸೇನೆಯ ಬೃಹತ್ ವಾಯು ದಾಳಿಗೆ35 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ.
ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಕನಿಷ್ಠ 35 ಫೆಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದರು. ಅನೇಕ ಕಟ್ಟಡಗಳು ಸಹ ಭಾರಿ ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
ಈ ಮಧ್ಯೆ, ದೇಶದ ನಾಗರಿಕ ಪ್ರದೇಶಗಳಲ್ಲಿ ಹಮಾಸ್ ಭಯೋತ್ಪಾದಕರ ಅಡಗುತಾಣಗಳ ನಾಶದ ಬಗ್ಗೆ ಇಸ್ರೇಲ್ ಸೇನೆ ಸಿದ್ಧತೆ ನಡೆಸುತ್ತಿದ್ದು, ಮಧ್ಯ ಗಾಜಾದ ಜ್ವೀಡಾ ಪ್ರದೇಶದಲ್ಲಿ ದಾಳಿ ನಡೆಸಿದೆ. ಈ ವೇಳೆ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಹಲವರು ಜನರು ಗಾಯಗೊಂಡಿದ್ದರು. ಕೇಂದ್ರ ದೇರ್ ಅಲ್-ಬಾಲಾಹ್ನ ಅಲ್-ಅಕ್ಸಾ ಆಸ್ಪತ್ರೆಯ ಅಧಿಕಾರಿಗಳು ಭಾನುವಾರ 35 ಶವಗಳು ಪತ್ತೆಯಾಗಿರುವುದನ್ನು ದೃಢಪಡಿಸಿದ್ದಾರೆ.