ಭಾರತದಲ್ಲಿ ಸ್ವಚ್ಛ ಭಾರತ ಅಭಿಯಾನ ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಾದ್ಯಂತ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಇಸ್ರೇಲ್‌ನಲ್ಲಿಯೂ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ವಿಶೇಷ ಪ್ಲಾನ್ ಮಾಡಲಾಗಿದೆ. ಇಸ್ರೇಲ್ ಸ್ಟಾರ್ಟ್ ಅಪ್ ಒಂದು ಕ್ಲೀನ್ ಕಾಯಿನ್ ಅಪ್ಲಿಕೇಷನ್ ಶುರು ಮಾಡಿದೆ. ಇದು, ಕಸ ತೆಗೆದ ಜನರಿಗೆ ವರ್ಚುವಲ್ ಕ್ಲೀನ್ ಕಾಯಿನ್ಸ್ ನೀಡ್ತಿದೆ.
ಹೌದು, ಕಸ ತೆಗೆದ ಫೋಟೋವನ್ನು ಅಪ್ಲಿಕೇಷನ್ ನಲ್ಲಿ ಅಪ್ಲೋಡ್ ಮಾಡಬೇಕು. ಕಸ ತೆಗೆದವರಿಗೆ ಅಪ್ಲಿಕೇಷನ್ ನಿಂದ ಕ್ಲೀನ್ ಕಾಯಿನ್ಸ್ ಸಿಗುತ್ತದೆ. ಅಲಿಶ್ಯಾ 10 ಬ್ಯಾಗ್ ಕಸದ ಫೋಟೋವನ್ನು ಹಾಕಿದ್ದಳು. ಅವಳಿಗೆ ಕ್ಲೀನ್ ಕಾಯಿನ್ ಸಿಕ್ಕಿದೆ. ಈ ವರ್ಚುವಲ್ ಹಣವನ್ನು ವಸ್ತುಗಳನ್ನು ಖರೀದಿಸಲು ಬಳಸಬಹುದು.
ಶತಮಾನಗಳ ಹಿಂದೆ ಕೆನಡಾಗೆ ಕದ್ದೊಯ್ದಿದ್ದ ಅನ್ನಪೂರ್ಣೆ ವಿಗ್ರಹ ಇಂದು ತವರಿಗೆ ವಾಪಸ್
ಎಲ್ಲಿ ಸ್ವಚ್ಛತೆ ಮಾಡಲಾಗಿದೆ, ಎಷ್ಟು ಸ್ವಚ್ಛತೆ ಮಾಡಲಾಗಿದೆ ಎಂಬುದನ್ನು ಫೋಟೋ ಮೂಲಕ ತಿಳಿದುಕೊಳ್ಳಲಾಗುತ್ತದೆ. ನಂತ್ರ ಅದಕ್ಕೆ ತಕ್ಕಂತೆ ಕಾಯಿನ್ಸ್ ನೀಡಲಾಗುತ್ತದೆ ಎಂದು ಕ್ಲೀನ್ ಕಾಯಿನ್ ಆ್ಯಪ್‌ನ ಸಹ ಸಂಸ್ಥಾಪಕ ಆಡಮ್ ರಾನ್ ಹೇಳಿದ್ದಾರೆ. ದೇಶದಲ್ಲಿ ಇದುವರೆಗೆ 16000 ಜನರು ಈ ಅಪ್ಲಿಕೇಶನ್‌ಗೆ ಸೈನ್ ಅಪ್ ಮಾಡಿದ್ದಾರೆ. ಈ ಪೈಕಿ 1200 ಜನರು ಪ್ರತಿದಿನ ಕಸ ಎತ್ತುವ ಮೂಲಕ ನಾಣ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.
ಈ ನಾಣ್ಯದಲ್ಲಿ ಬಟ್ಟೆಗಳನ್ನು ಖರೀದಿಸುವುದು, ಹೋಟೆಲ್ ರೂಮ್ ಸೇರಿದಂತೆ ಅನೇಕ ಕೆಲಸಕ್ಕೆ ಬಳಸಬಹುದು. ಸರಾಸರಿ ಇಸ್ರೇಲಿ ಪ್ರಜೆಯೊಬ್ಬ ಪ್ರತಿದಿನ 1.7 ಕೆಜಿ ಕಸ ತೆಗೆಯುತ್ತಾನೆ ಎಂದು ಅಂದಾಜಿಸಲಾಗಿದೆ.