ಇಸ್ರೇಲ್ ನಲ್ಲಿ ಮೊದಲ ಫ್ಲೋರೋನಾ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಕೊರೋನಾ ಮತ್ತೊಮ್ಮೆ ರೂಪಾಂತರಗೊಂಡಿದೆ. ಕೊರೋನಾ ಸೋಂಕು, ಡೆಲ್ಟಾ, ಒಮಿಕ್ರಾನ್ ನಂತರ ಫ್ಲೋರೋನಾ ಆತಂಕ ಶುರುವಾಗಿದೆ.
ಕೊರೋನಾ, ಇನ್ ಫ್ಲುಯೆಂಜಾ ಸೇರಿಕೊಂಡು ಡಬಲ್ ಸೋಂಕು ಫ್ಲೋರೋನಾ ರೂಪಾಂತರಗೊಂಡಿದೆ ಎಂದು ಹೇಳಲಾಗಿದೆ.
ಈ ಮೂಲಕ ಕೊರೋನಾ ಮತ್ತೊಮ್ಮೆ ರೂಪಾಂತರಗೊಂಡಿದೆ. ಕಳೆದ 2 -3 ವರ್ಷಗಳಿಂದ ಕೊರೋನಾ ಕಾರಣದಿಂದಾಗಿ ವಿಶ್ವದಲ್ಲಿ ಜನ ತತ್ತರಿಸಿಹೋಗಿದ್ದಾರೆ. ಕೊರೋನಾ ಆರಂಭವಾದಾಗಿನಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದು, ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಕೊರೋನಾ, ಡೆಲ್ಟಾ, ಒಮಿಕ್ರಾನ್ ಬಳಿಕ ಫ್ಲೋರೋನಾ ಪ್ರಕರಣ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.
ಫ್ಲೋರೋನಾ ಮೊದಲ ಪ್ರಕರಣವನ್ನು ಇಸ್ರೇಲ್ ಪತ್ತೆ ಮಾಡಿದೆ, ಇದು COVID-19 ಮತ್ತು ಇನ್ ಫ್ಲುಯೆಂಜಾ ಡಬಲ್ ಸೋಂಕು ಎಂದು ಅರಬ್ ನ್ಯೂಸ್ ಶುಕ್ರವಾರ ಹೇಳಿದೆ.
ಈ ವಾರ ಹೆರಿಗೆಗಾಗಿ ರಾಬಿನ್ ವೈದ್ಯಕೀಯ ಕೇಂದ್ರಕ್ಕೆ ಪ್ರವೇಶಿಸಿದ ಮಹಿಳೆಯಲ್ಲಿ ಡಬಲ್ ಸೋಂಕಿನ ಪ್ರಕರಣ ಕಂಡುಬಂದಿದೆ ಎಂದು ಇಸ್ರೇಲಿ ಪತ್ರಿಕೆಯೊಂದು ವರದಿ ಮಾಡಿದೆ.
ಏತನ್ಮಧ್ಯೆ, ಇಸ್ರೇಲ್ ಶುಕ್ರವಾರ, ಕೊರೋನವೈರಸ್ಗೆ ಹೆಚ್ಚು ದುರ್ಬಲವಾಗಿರುವ ಜನರಿಗೆ ನಾಲ್ಕನೇ ಲಸಿಕೆ ಡೋಸ್ ವಿತರಿಸಲು ಪ್ರಾರಂಭಿಸಿದೆ,