ಒಮಿಕ್ರಾನ್ ಇಡೀ ವಿಶ್ವದಲ್ಲೆ ಅತ್ಯಂತ ವೇಗವಾಗಿ ಹರಡುತ್ತಿದೆ. ಒಮಿಕ್ರಾನ್ ಲಕ್ಷಣಗಳಿದ್ದ ಕೊರೊನಾ ವೈರಸ್ ಸೋಂಕಿತನೋರ್ವನ ಮರಣದ ನಂತರ ಇಸ್ರೇಲ್ ನಾಲ್ಕನೇ ಡೋಸ್ ನೀಡಲು ತೀರ್ಮಾನಿಸಿದೆ. 60 ವರ್ಷ ಮೇಲ್ಪಟ್ಟವರಿಗೆ ಈಗಾಗ್ಲೇ ಬೂಸ್ಟರ್ ಡೋಸ್ ನೀಡಿದ್ರು ನಾಲ್ಕನೇ ಡೋಸ್ ಸಲಹೆಗೂ ಇಸ್ರೇಲ್ ಪ್ರಧಾನಿ ಅಸ್ತು ಎಂದಿದ್ದಾರೆ.
ತೀವ್ರ ವಿರೋಧಕ್ಕೆ ಕಾರಣವಾಗಿದೆ ಗಂಗೂಲಿಯ ಈ ಹೇಳಿಕೆ
ಇಸ್ರೇಲ್ ತಜ್ಞರ ಸಲಹೆ ಪ್ರಕಾರ ವ್ಯಾಕ್ಸಿನ್ ಒಂದೇ ಇದಕ್ಕೆ ಪರಿಹಾರವೆಂದು ದೇಶದೆಲ್ಲೆಡೆ ವ್ಯಾಕ್ಸಿನೇಷನ್ ಪ್ರಕ್ರಿಯೆ ಚುರುಕುಗೊಂಡಿದೆ. ಈ ವೇಳೆ ಇಸ್ರೇಲಿಗರಿಗೆ ಸಂದೇಶ ನೀಡಿರುವ ಪ್ರಧಾನಿ ನಫ್ತಾಲಿ ಬೆನೆಟ್, ಸಮಯ ವ್ಯರ್ಥ ಮಾಡದೇ ವ್ಯಾಕ್ಸಿನ್ ಪಡೆದುಕೊಳ್ಳಿ ಎಂದಿದ್ದಾರೆ.
ಈ ಮೂಲಕ ಇಸ್ರೇಲ್ ವಿಶ್ವದಲ್ಲೆ ನಾಲ್ಕನೇ ಡೋಸ್ ನೀಡುವ ಮೊದಲ ದೇಶವಾಗಿದೆ. ಇಸ್ರೇಲ್ ನಲ್ಲಿ 340 ಒಮಿಕ್ರಾನ್ ಕೇಸ್ ಗಳು ದೃಢವಾಗಿದ್ದು ವೈರಸ್ ಹರಡುವಿಕೆ ನಿಯಂತ್ರಿಸಲು ಯುನೈಟೆಡ್ ಸ್ಟೇಟ್ಸ್, ಟರ್ಕಿ, ಇಟಲಿ, ಜರ್ಮನಿ, ಕೆನಡಾ ರಾಷ್ಟ್ರಗಳ ಪ್ರಯಾಣಿಕರಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.