ಕುಖ್ಯಾತ ಭಯೋತ್ಪಾದಕ ಜೈಶ್ ಎ ಮೊಹಮ್ಮದ್ (JeM) ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಈಗ ಆಫ್ಘಾನಿಸ್ತಾನದ ಗಡಿಭಾಗದಲ್ಲಿದ್ದಾನೆ. ಆತನನ್ನು ಬಂಧಿಸಿ ತಮ್ಮ ವಶಕ್ಕೆ ನೀಡುವಂತೆ ಪಾಕಿಸ್ತಾನ, ಅಫ್ಘಾನಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದ್ದು, ಇದಕ್ಕೆ ಉತ್ತರಿಸಿರುವ ತಾಲಿಬಾನಿಗಳು ಆತ ನಿಮ್ಮ ದೇಶದಲ್ಲೇ ಇದ್ದಾನೆ ಎಂದು ಹೇಳಿದ್ದಾರೆ.
ಬುಧವಾರದಂದು ಇಸ್ಲಾಮಾಬಾದ್ ಮೂಲಕ ಅಧಿಕೃತ ಪತ್ರವನ್ನು ಆಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಇದರಲ್ಲಿ ಮಸೂದ್ ಅಜರ್, ನಂಗರ್ಹಾರ್ ಅಥವಾ ಕುನಾರ್ ನಲ್ಲಿದ್ದು, ಆತನನ್ನು ಬಂಧಿಸಿ ತಮ್ಮ ವಶಕ್ಕೆ ನೀಡಬೇಕೆಂದು ಮನವಿ ಮಾಡಲಾಗಿತ್ತು.
ಇದಕ್ಕೆ ಉತ್ತರಿಸಿರುವ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ್ ವಕ್ತಾರರು, ಜೈಶ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಅಫ್ಘಾನಿಸ್ತಾನದಲ್ಲಿ ಇಲ್ಲ. ಅದು ಪಾಕಿಸ್ತಾನದ ಸಂಘಟನೆಯಾಗಿದ್ದು ಆತ ನಿಮ್ಮಲ್ಲಿಯೇ ಇದ್ದಾನೆ ಎಂದು ಹೇಳಿದ್ದಾರೆ. ನಾವು ಕೂಡ ಈ ವಿಚಾರವನ್ನು ಮಾಧ್ಯಮಗಳ ಮೂಲಕ ಕೇಳಿದ್ದೇವೆ. ಆದರೆ ಅದರಲ್ಲಿ ಹುರುಳಿಲ್ಲ ಎಂದಿದ್ದಾರೆ.