ಸದ್ಯ, ಟಿ – 20 ವಿಶ್ವಕಪ್ ಗೆ ಪ್ರಕಟವಾಗಿರುವ ಭಾರತ ತಂಡದ ಬಗ್ಗೆ ಚರ್ಚೆಯಾಗ್ತಿದೆ. ಐಸಿಸಿ ಟಿ 20 ವಿಶ್ವಕಪ್ ನಲ್ಲಿ ಆಡುವ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಕನಸು, ಕನಸಾಗಿಯೇ ಉಳಿದಿದೆ. ತಂಡದಲ್ಲಿ ಸಂಜು ಸ್ಥಾನ ಪಡೆದಿಲ್ಲ.
ಟೀಂ ಇಂಡಿಯಾದ ಬಲಿಷ್ಠ ಕ್ರಿಕೆಟಿಗ ರಿಷಭ್ ಪಂತ್, ಸಂಜು ಸ್ಯಾಮ್ಸನ್ ಖಳನಾಯಕ ಎಂದು ಸಾಬೀತಾಗಿದೆ. ಕಳೆದ ಒಂದು ವರ್ಷದಲ್ಲಿ ಪಂತ್ ನೀಡಿದ ಪ್ರದರ್ಶನವನ್ನು ಪರಿಗಣಿಸಿ, ಅವರನ್ನು ತಂಡದಲ್ಲಿ ಮುಂದುವರಿಸಲಾಗಿದೆ.
ಸಂಜು ಸ್ಯಾಮ್ಸನ್, ಹತ್ತು ಅಂತರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 11.70 ಸರಾಸರಿಯಲ್ಲಿ 117 ರನ್ ಮತ್ತು 110.37 ಸ್ಟ್ರೈಕ್ ರೇಟ್ ಗಳಿಸಿದ್ದಾರೆ. ರಿಷಭ್ ಪಂತ್ ಅದೇ ಅಂತಾರಾಷ್ಟ್ರೀಯ ಮಾದರಿಯ 33 ಪಂದ್ಯಗಳಲ್ಲಿ 21.33 ಸರಾಸರಿ ಮತ್ತು 123.07 ಸ್ಟ್ರೈಕ್ ರೇಟ್ ನಲ್ಲಿ 512 ರನ್ ಗಳಿಸಿದ್ದಾರೆ.
ಟೀಂ ಇಂಡಿಯಾದಲ್ಲಿ, ರಿಷಭ್ ಪಂತ್ ಹೊರತುಪಡಿಸಿ, ಕೆ ಎಲ್ ರಾಹುಲ್ ಮತ್ತು ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ಮಾಡುತ್ತಾರೆ. ಹಾಗಾಗಿ ಟೀಂ ಇಂಡಿಯಾಕ್ಕೆ ಇದರ ಬಗ್ಗೆ ಚಿಂತೆಯಿಲ್ಲ.