ದೇಶದ ಅತ್ಯಂತ ಸಿರಿವಂತ ಉದ್ಯಮಿಗಳಲ್ಲೊಬ್ಬರಾದ ಮುಖೇಶ್ ಅಂಬಾನಿ ಅವರ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಮುಖೇಶ್ ಅಂಬಾನಿ ಮತ್ತವರ ಪತ್ನಿ ಅಜ್ಜ-ಅಜ್ಜಿಯಾದ ಸಡಗರದಲ್ಲಿದ್ದಾರೆ. ಕಾರಣ ಅಂಬಾನಿ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ.
ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ. ನವೆಂಬರ್ 19 ರಂದು ಇಶಾಗೆ ಹೆರಿಗೆಯಾಗಿದೆ. ಒಂದು ಗಂಡು ಮತ್ತು ಹೆಣ್ಣು ಮಗುವಿನ ತಾಯಿಯಾಗಿ ಇಶಾ ಭಡ್ತಿ ಪಡೆದಿದ್ದಾರೆ. ಇಶಾ ಅಂಬಾನಿ 2018ರಲ್ಲಿ ಹಿರಿಯ ಉದ್ಯಮಿ ಅಜಯ್ ಪಿರಾಮಲ್ ಅವರ ಪುತ್ರ ಆನಂದ್ ಪಿರಾಮಲ್ ಅವರನ್ನು ಮದುವೆಯಾಗಿದ್ದರು. ನಾಲ್ಕು ವರ್ಷಗಳ ಬಳಿಕ ಇಶಾ ಅಮ್ಮನಾಗಿದ್ದಾರೆ.
ಈಗಾಗ್ಲೇ ಇಶಾ ಸಹೋದರ ಆಕಾಶ್‌ಗೆ ಒಬ್ಬ ಮಗನಿದ್ದಾನೆ. ಮುಖೇಶ್ ಅಂಬಾನಿ ಅವರ ಇನ್ನೋರ್ವ ಪುತ್ರ ಅನಂತ್ ಅಂಬಾನಿ ವಿವಾಹ ಕೂಡ ನಿಶ್ಚಯವಾಗಿದೆ.