
ಮಲಬದ್ಧತೆ ಸಮಸ್ಯೆ ಬಹುತೇಕರನ್ನು ಕಾಡುತ್ತದೆ. ಒಂದಿಲ್ಲೊಂದು ಬಾರಿ ಪ್ರತಿಯೊಬ್ಬರಿಗೂ ಈ ಸಮಸ್ಯೆ ಬಂದೇ ಬರುತ್ತದೆ. ಮಲಬದ್ಧತೆ ಹೋಗಲಾಡಿಸಲು ಜನರು ಔಷಧಿಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಆದರೆ ಪದೇ ಪದೇ ಅಲೋಪತಿ ಔಷಧಗಳನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರ. ಆದ್ದರಿಂದ ಮಲಬದ್ಧತೆಗೆ ಮನೆಮದ್ದುಗಳನ್ನು ಮಾಡುತ್ತಾರೆ ಅಥವಾ ಆಯುರ್ವೇದ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ.
ಸಾಮಾನ್ಯವಾಗಿ ಮಲಬದ್ಧತೆ ಇರುವವರು ಇಸಬ್ಗೋಲ್ ಅನ್ನು ಸೇವಿಸ್ತಾರೆ. ಇದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಆದರೆ ಇದನ್ನು ಅತಿಯಾಗಿ ತಿನ್ನುವುದರಿಂದ ಕೆಲವು ಅನಾನುಕೂಲತೆಗಳಿವೆ.ಇಸಬ್ಗೋಲ್ ಜೊತೆ ನೀವು ಸಾಕಷ್ಟು ನೀರು ಕುಡಿಯಬೇಕು. ಇಲ್ಲದೇ ಹೋದಲ್ಲಿ ಮಲಬದ್ಧತೆ ಸಮಸ್ಯೆ ಇನ್ನಷ್ಟು ಗಂಭೀರವಾಗಬಹುದು. ಹಾಗಾಗಿ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಇಸಬ್ಗೋಲ್ ಅನ್ನು ಪ್ರತಿದಿನ ಸೇವಿಸುವುದು ಹಾನಿಕಾರಕ. ಇದರಿಂದ ಕೆಲವೊಂದು ಗಂಭೀರ ಕಾಯಿಲೆಗಳಿಗೂ ಕಾರಣವಾಗಬಹುದು. ಇದು ಕರುಳಿನಲ್ಲಿ ಅಡಚಣೆಯನ್ನು ಉಂಟುಮಾಡಬಹುದು. ಮಲ ತುಂಬಾ ಗಟ್ಟಿಯಾದಲ್ಲಿ ಅದು ಸುಲಭವಾಗಿ ಹೊರಬರಲು ಸಾಧ್ಯವಾಗುವುದಿಲ್ಲ. ಇಸಬ್ಗೋಲ್ ಮಲವನ್ನು ಮೃದುಗೊಳಿಸಲು ಕೆಲಸ ಮಾಡುತ್ತದೆ. ಆದ್ದರಿಂದ ಸೈಲಿಯಮ್ ಬೋಲಸ್ ಊದಿಕೊಂಡಾಗ ಕರುಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ.
ಪ್ರತಿದಿನ ಇದನ್ನು ತಿಂದಾಗ ಕರುಳು ತುಂಬಾ ವಿಸ್ತರಿಸುತ್ತದೆ. ಆಹಾರದ ತುಂಡುಗಳು ಕರುಳಿನಿಂದ ಸುಲಭವಾಗಿ ಹಾದುಹೋಗುವುದಿಲ್ಲ. ಇಲ್ಲಿಯೇ ಕರುಳಿನಲ್ಲಿನ ಅಡಚಣೆಯ ಕಾರಣವು ರೂಪುಗೊಳ್ಳುತ್ತದೆ ಮತ್ತು ಇದು ಕರುಳಿನ ಛಿದ್ರತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.