ಹದಿಹರೆಯದ ವಯಸ್ಸಿಗೆ ಬರುತ್ತಿದ್ದಂತೆ ಹಾರ್ಮೋನ್ ಗಳಲ್ಲಿ ವ್ಯತ್ಯಾಸವಾಗುವುದರಿಂದ ಚರ್ಮದ ಸಮಸ್ಯೆಗಳು ಎದುರಾಗುತ್ತದೆ. ಅದರಲ್ಲೂ ಮುಖದಲ್ಲಿ ಮೊಡವೆಗಳು, ಗುಳ್ಳೆಗಳು ಮೂಡುತ್ತದೆ. ಈ ಸಮಸ್ಯೆಗಳು ಹೀಗೆ ಮುಂದುವರಿಯುತ್ತಿದ್ದರೆ ನಿಮಗೆ ವಯಸ್ಸಾಗುವ ಮುನ್ನವೇ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಹಾಗಾಗಿ 20ನೇ ವಯಸ್ಸಿನಲ್ಲಿ ಮುಖದ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
*ರಾತ್ರಿ ಮಲಗುವಾಗ ಮೇಕಪ್ ಹಚ್ಚಿಕೊಂಡು ಮಲಗಬೇಡಿ. ಇದರಿಂದ ಚರ್ಮ ತೀವ್ರ ಹಾನಿಯಾಗುತ್ತದೆ. ಹಾಗಾಗಿ ಮೇಕಪ್ ತೆಗೆದು ಮಲಗಿ.
*ಸೂರ್ಯನ ಬಿಸಿಲಿಗೆ ಚರ್ಮವನ್ನು ಒಡ್ಡುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಹಾಗಾಗಿ ಹೊರಗಡೆ ಓಡಾಡುವಾಗ ಮುಖಕ್ಕೆ ಸನ್ ಸ್ಕ್ರೀನ್ ಬಳಸಿ.
*ಚರ್ಮಕ್ಕೆ ಆಗಾಗ ಟೋನರ್ ಗಳನ್ನು ಬಳಸಿ. ಇದರಿಂದ ಚರ್ಮದಲ್ಲಿರುವ ಕಲ್ಮಶಗಳು ನಿವಾರಣೆಯಾಗಿ ಸ್ಕಿನ್ ಕ್ಲೀನ್ ಆಗುತ್ತದೆ.
*ಮೊಡವೆ, ಗುಳ್ಳೆಗಳು ಮೂಡಿದರೆ ಅದನ್ನು ಒಡೆಯಲು ಹೋಗಬೇಡಿ, ಬದಲಾಗಿ ಅದಕ್ಕೆ ಮನೆಮದ್ದು ಅಥವಾ ಕ್ರೀಂಗಳನ್ನು ಬಳಸಿ ನಿವಾರಿಸಿಕೊಳ್ಳಿ. ಇಲ್ಲವಾದರೆ ಕಲೆಗಳು ಮೂಡುತ್ತವೆ.
*ರಾತ್ರಿ ಮಲಗುವಾಗ ಮುಖಕ್ಕೆ ಮಾಯಿಶ್ಚರೈಸರ್ ಗಳನ್ನು ಹಚ್ಚಿ. ಇದರಿಂದ ಮುಖದ ಚರ್ಮ ತೇವಾಂಶದಿಂದ ಹೊಳೆಯುತ್ತಿರುತ್ತದೆ. ಚರ್ಮವು ಆರೋಗ್ಯವಾಗಿರುತ್ತದೆ.