alex Certify ನಿಮಗೆ ಕಾಡುವಂತಹ ಕಾಲು ನೋವು ಅಧಿಕ ಕೊಲೆಸ್ಟ್ರಾಲ್ನ ಸಂಕೇತವೇ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ಕಾಡುವಂತಹ ಕಾಲು ನೋವು ಅಧಿಕ ಕೊಲೆಸ್ಟ್ರಾಲ್ನ ಸಂಕೇತವೇ…..?

ಕೆಲವರು ನಿರಂತರವಾಗಿ ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಅವರಿಗೆ ಪ್ರತಿದಿನದ ಕೆಲಸಗಳನ್ನು ಮಾಡಲು ಕಷ್ಟವಾಗುತ್ತದೆ. ನಡೆದಾಡಲು, ಓಡಾಡಲು, ಮನೆಗೆಲಸ ಮಾಡಲು, ಕುಳಿತುಕೊಳ್ಳಲು ಕಷ್ಟಪಡುತ್ತಾರೆ. ಆದರೆ ಈ ಕಾಲುನೋವನ್ನು ಸಾಮಾನ್ಯವೆಂದು ನಿರ್ಲಕ್ಷಿಸಬೇಡಿ. ಯಾಕೆಂದರೆ ಈ ಅಸಹನೀಯ ಕಾಲು ನೋವು ಅಧಿಕ ಕೊಲೆಸ್ಟ್ರಾಲ್ನ ಸಂಕೇತವಾಗಿರಬಹುದು.

ಹೌದು. ನಿರಂತರವಾದ ಕಾಲು ನೋವು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿ ಎಂಬುದನ್ನು ಸೂಚಿಸುತ್ತದೆಯಂತೆ. ಹಾಗಾಗಿ ಅಧಿಕ ರಕ್ತದ ಸಕ್ಕರೆ ಮಟ್ಟ ಅಥವಾ ಅಧಿಕ ರಕ್ತದೊತ್ತಡ ಮಾತ್ರವಲ್ಲದೆ ಅಧಿಕ ಕೊಲೆಸ್ಟ್ರಾಲ್ ಮಟ್ಟಗಳು ಹೆಚ್ಚಾದಾಗ ದೇಹದ ಬಗ್ಗೆ ಕಾಳಜಿವಹಿಸುವುದು ಅವಶ್ಯಕ. ಯಾಕೆಂದರೆ ಅಧಿಕ ಕೊಲೆಸ್ಟ್ರಾಲ್ ಹೃದ್ರೋಗಕ್ಕೆ ಅಪಾಯಕಾರಿಯಾಗಿದೆ.

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಅಪಧಮನಿಯಲ್ಲಿ ರಕ್ತ ಸಂಚಾರಕ್ಕೆ ತಡೆಯೊಡ್ಡುತ್ತದೆ. ಇದರಿಂದ ಹೃದಯಾಘಾತ ಸಂಭವಿಸಬಹುದು. ಹಾಗಾದ್ರೆ ಕಾಲು ನೋವು ಮತ್ತು ಅಧಿಕ ಕೊಲೆಸ್ಟ್ರಾಲ್ ನಡುವಿನ ಸಂಬಂಧದ ಬಗ್ಗೆ ತಿಳಿದುಕೊಳ್ಳಿ.

ತಜ್ಞರ ಪ್ರಕಾರ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಕಾಲುಗಳಿಗೆ ರಕ್ತವನ್ನು ಪೂರೈಕೆ ಮಾಡುವಂತಹ ಅಪಧಮನಿಗಳು ಕೊಬ್ಬಿನಿಂದ ಮುಚ್ಚುತ್ತವೆ. ಇದರಿಂದ ಕಾಲುಗಳಿಗೆ ಸರಿಯಾಗಿ ರಕ್ತಸಂಚಾರವಾಗುವುದಿಲ್ಲ. ಇದರಿಂದ ಕೆಳ ಬೆನ್ನು, ತೊಡೆಗಳು ಮತ್ತು ಕರುಗಳಲ್ಲಿ ನೋವುಗಳು ಕಂಡುಬರುತ್ತದೆ. ಹೆಚ್ಚಾಗಿ ಈ ನೋವು ವ್ಯಾಯಾಮದ ಸಮಯದಲ್ಲಿ ಅಥವಾ ಹೆಚ್ಚು ಕಾಲ ಮೆಟ್ಟಿಲು ಹತ್ತುವುದು, ಇಳಿಯುವುದು, ಅಥವಾ ನಡೆಯುವಂತಹ ಇತರ ಚಟುವಟಿಕೆಗಳ ಸಮಯದಲ್ಲಿ ಕಂಡುಬರುತ್ತವೆ. ಅಲ್ಲದೇ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಕಾಲು ನೋವು, ಊತ, ಮರಗಟ್ಟುವಿಕೆ, ಗುಣವಾಗದ ಗಾಯಗಳು, ದೌರ್ಬಲ್ಯ, ಕಾಲುಗಳಲ್ಲಿ ಬಣ್ಣ ಬದಲಾಯಿಸುವಂತಹ ಲಕ್ಷಣಗಳು ಕಂಡುಬರುತ್ತದೆ.

ಹಾಗಾಗಿ ಜನರು ತಮ್ಮ ದೇಹದಲ್ಲಾಗುವ ಈ ಬದಲಾವಣೆಗಳನ್ನು ಗಮನಿಸಿ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳಿ. ವೈದ್ಯರು ಸೂಚಿಸಿದ ಔಷಧಿಗಳನ್ನು ತಪ್ಪದೇ ತೆಗೆದುಕೊಳ್ಳಿ, ಹಾಗೇ ಸಮತೋಲಿತ ಆಹಾರವನ್ನು ಸೇವಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...