ಚಿಕ್ಕ ಮಕ್ಕಳಿಗೆ ಮಣ್ಣು ಸಿಕ್ಕಿದ್ರೆ ಮುಗೀತು. ಮಣ್ಣಿನಲ್ಲಿ ಆಡುವ ಬದಲು ಬಾಯಿಗೆ ಕೆಲಸ ಕೊಡ್ತಾರೆ. ಮಕ್ಕಳು ಮಣ್ಣು ತಿನ್ನಲು ಕಾರಣವೇನು ಎಂಬುದಕ್ಕೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಕಬ್ಬಿಣಾಂಶದ ಕೊರತೆ ಇರುವ ಮಕ್ಕಳು ಹೆಚ್ಚು ಮಣ್ಣು ತಿನ್ನುತ್ತಾರೆ ಎಂದು ವೈದ್ಯರು ಹೇಳ್ತಾರೆ.
ಮಣ್ಣಿನಲ್ಲಿ ಬ್ಯಾಕ್ಟೀರಿಯಾ, ಕ್ರಿಮಿ ಕೀಟಗಳಿರುವುದರಿಂದ ಪೋಷಕರು ಗಾಬರಿಗೊಳ್ಳುವುದು ಸಹಜ. ಮಣ್ಣು ತಿನ್ನುವುದ್ರಿಂದ ಹೊಟ್ಟೆಯ ಸಮಸ್ಯೆ ಮತ್ತು ಮಲಬದ್ಧತೆ ಕಾಡುತ್ತದೆ. ಮಗುವಿನ ಈ ಅಭ್ಯಾಸವನ್ನು ಬಿಡಿಸಲು ಅನೇಕ ಬಾರಿ ಪ್ರಯತ್ನಿಸಿ ಸಾಧ್ಯವಾಗದಿದ್ದಲ್ಲಿ, ಈ ಮನೆಮದ್ದು ನಿಮಗೆ ಬಹಳ ಪ್ರಯೋಜನಕಾರಿ.
ಕ್ಯಾಲ್ಸಿಯಂ ಕೊರತೆ ಮಕ್ಕಳು ಮಣ್ಣು ತಿನ್ನಲು ಕಾರಣ . ಹಾಗಾಗಿ ನೀವು ಮಕ್ಕಳಿಗೆ ಕ್ಯಾಲ್ಸಿಯ ಹೆಚ್ಚಿರುವ ಆಹಾರ ನೀಡಿ.
ಮಣ್ಣು ತಿನ್ನುವುದನ್ನು ಬಿಡಿಸಲು ಲವಂಗವನ್ನು ನೀರಿನಲ್ಲಿ ಕುದಿಸಿ, ನಂತರ ಈ ನೀರನ್ನು 1-1 ಚಮಚದಷ್ಟು ದಿನಕ್ಕೆ 3 ಬಾರಿ ಕುಡಿಯಲು ಕೊಡಿ.
ಕಳಿತ ಬಾಳೆಹಣ್ಣಿಗೆ ಜೇನುತುಪ್ಪ ಮಿಕ್ಸ್ ಮಾಡಿ ತಿನ್ನಲು ಕೊಡಿ. ಕೆಲವು ದಿನಗಳಲ್ಲಿ ಮಗು ಮಣ್ಣನ್ನು ತಿನ್ನುವುದು ನಿಲ್ಲಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೇದು.
ಮಾವಿನ ಗೊರಟೆ ಪುಡಿಮಾಡಿ ಅದರ ಚೂರ್ಣ ತಯಾರಿಸಿ ದಿನಕ್ಕೆರಡು ಬಾರಿ ತಿನ್ನಲು ಕೊಡಿ. ಈ ಪುಡಿ ಮಗುವಿನ ಹೊಟ್ಟೆಯಲ್ಲಿರುವ ಎಲ್ಲಾ ಕೆಟ್ಟ ಕೀಟಗಳನ್ನು ಸಾಯಿಸುತ್ತದೆ.
ರಾತ್ರಿಯ ಹೊತ್ತು ಬೆಚ್ಚಗಿನ ನೀರಿಗೆ ಅಜವಾನ ಪುಡಿಮಾಡಿ ಹಾಕಿ ಒಂದು ಚಮಚದಷ್ಟು ಮಗುವಿಗೆ ಕೊಡಿ.