ಅತಿಯಾದ ತೂಕ ಇಳಿಸಲು ಹಾಗೂ ದೇಹವನ್ನು ಫಿಟ್ ಆಗಿರಿಸಿಕೊಳ್ಳಲು ವ್ಯಾಯಾಮ ಮಾಡುವುದು ಸಾಮಾನ್ಯ. ಅನೇಕರು ಜಿಮ್‌ನಲ್ಲಿ ಟ್ರೆಡ್‌ಮಿಲ್ ನಡಿಗೆಯೊಂದಿಗೆ ವ್ಯಾಯಾಮವನ್ನು ಪ್ರಾರಂಭಿಸುತ್ತಾರೆ. ಆದರೆ ಟ್ರೆಡ್‌ಮಿಲ್‌ನಲ್ಲಿ ಹೆಚ್ಚು ಹೊತ್ತು ನಡೆಯುವುದು ಅಥವಾ ಓಡುವುದು ಒಳ್ಳೆಯದಲ್ಲ, ಇದರಿಂದ ಮೊಣಕಾಲು ನೋವು ಬರುತ್ತದೆ ಎಂಬ ಮಾತಿದೆ. ಇದು ನಿಜವೋ ಅಥವಾ ವದಂತಿಯೋ ಎಂಬುದನ್ನು ತಜ್ಞರಿಂದಲೇ ತಿಳಿಯೋಣ.
ವ್ಯಾಯಾಮಕ್ಕೆ ಟ್ರೆಡ್ ಮಿಲ್ ಎಷ್ಟು ಸೂಕ್ತ?
ಖ್ಯಾತ ಮೂಳೆ ತಜ್ಞರು ಟ್ರೆಡ್‌ಮಿಲ್‌ನ ಸಾಧಕ ಬಾಧಕಗಳ ಬಗ್ಗೆ ವಿವರಿಸಿದ್ದಾರೆ. ಕಾಂಕ್ರೀಟ್ ರಸ್ತೆಯಲ್ಲಿ ವಾಕಿಂಗ್ ಅಥವಾ ಜಾಗಿಂಗ್ ಮಾಡುವುದಕ್ಕಿಂತ ಟ್ರೆಡ್‌ಮಿಲ್ ಬೆಸ್ಟ್ ಎನ್ನುತ್ತಾರೆ ವೈದ್ಯರು. ಟ್ರೆಡ್‌ಮಿಲ್‌ಗಳು ಹೀರಿಕೊಳ್ಳುವ ಬೆಲ್ಟ್‌ಗಳನ್ನು ಹೊಂದಿದ್ದು ಅದು ಮೊಣಕಾಲು ಮತ್ತು ಕಣಕಾಲುಗಳ ಮೇಲೆ ಕಡಿಮೆ ಒತ್ತಡವನ್ನು ಬೀರುತ್ತದೆ. ಹಾಗಾಗಿ ಔಟ್‌ಡೋರ್ ರನ್ನಿಂಗ್‌ಗಿಂತ ಟ್ರೆಡ್‌ಮಿಲ್ ಉತ್ತಮ ಅನ್ನೋದು ಅವರ ಅಭಿಪ್ರಾಯ.
ಹುಲ್ಲು ಮತ್ತು ಕಡಲತೀರಗಳಲ್ಲಿ ಓಡುವ ಆಯ್ಕೆಯನ್ನು ಹೊಂದಿದ್ದರೆ ಅದು ಇನ್ನೂ ಉತ್ತಮವಾಗಿರುತ್ತದೆ. ಆದರೆ ಟ್ರೆಡ್‌ಮಿಲ್‌ನಲ್ಲಿ ವಾಕ್ ಅಥವಾ ರನ್ನಿಂಗ್ ಮಾಡುವುದರಿಂದ ಮೊಣಕಾಲು ನೋವು ಬರುತ್ತದೆ ಎಂಬ ವಾದ ಅರ್ಥಹೀನ. ಟ್ರೆಡ್ ಮಿಲ್ ಬಳಸುವುದರಿಂದ ಮೊಣಕಾಲಿನ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.
ಟ್ರೆಡ್ ಮಿಲ್ ಬಳಕೆ ಏಕೆ ಸೂಕ್ತ?
ಟ್ರೆಡ್‌ಮಿಲ್‌ಗಳು ನಯವಾದ ಮತ್ತು ಸಮವಾದ ಮೇಲ್ಮೈಯನ್ನು ಹೊಂದಿರುತ್ತವೆ. ಹಾಗಾಗಿ ಅದು ನಮ್ಮ ಕೀಲುಗಳಿಗೆ ಒಳ್ಳೆಯದು. ಟ್ರೆಡ್‌ಮಿಲ್‌ನಲ್ಲಿ ವೇಗ, ಇಳಿಜಾರು ಮತ್ತು ತೀವ್ರತೆಯನ್ನು ನಿಯಂತ್ರಿಸಬಹುದು, ಇದು ಗಾಯದ ಅಪಾಯವನ್ನು ಕಡಿಮೆ ಮಾಡುತ್ತದೆ. ಅನೇಕ ಟ್ರೆಡ್‌ಮಿಲ್‌ಗಳು ಮೆತ್ತನೆಯ ಡೆಕ್‌ಗಳನ್ನು ಹೊಂದಿದ್ದು ಅದು ಪ್ರಭಾವವನ್ನು ಹೀರಿಕೊಳ್ಳುತ್ತದೆ. ಅವು ಮೊಣಕಾಲುಗಳಿಗೆ ಮೃದುವಾದ ಅನುಭವ ನೀಡುತ್ತವೆ.