ಗರ್ಭಾವಸ್ಥೆಯಲ್ಲಿ ಅನೇಕ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಅದರಲ್ಲೂ ಪ್ರಯಾಣಕ್ಕೆ ಸಂಬಂಧಿಸಿದಂತೆ ಗರ್ಭಿಣಿಯರು ಎಚ್ಚರ ವಹಿಸಲೇಬೇಕು. ಪ್ರಯಾಣಕ್ಕೂ ಮುನ್ನ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಅವಶ್ಯಕ. ಪ್ರಯಾಣದ ಸಂದರ್ಭದಲ್ಲಿ ಒಂದು ಸಣ್ಣ ಅಜಾಗರೂಕತೆ ಕೂಡ ಹೊಟ್ಟೆಯಲ್ಲಿರುವ ಮಗುವಿಗೆ ಅಪಾಯಕಾರಿಯಾಗಬಹುದು.
ಗರ್ಭಾವಸ್ಥೆಯಲ್ಲಿ ಪ್ರಯಾಣ ಮಾಡದಂತೆ ಮನೆಯ ಹಿರಿಯರು ಕೂಡ ಸಲಹೆ ನೀಡುತ್ತಾರೆ. ಇದು ಮಗುವಿನ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಅವರ ಭಾವನೆ. ಗರ್ಭಿಣಿಯ ವೈದ್ಯಕೀಯ ಸ್ಥಿತಿಯನ್ನು ಪರೀಕ್ಷಿಸಿ, ವೈದ್ಯರು ಅನುಮತಿ ನೀಡಿದರೆ ಮಾತ್ರ ಗರ್ಭಿಣಿಯರು ಪ್ರಯಾಣ ಮಾಡಬೇಕು.
ಗರ್ಭಾವಸ್ಥೆಯಲ್ಲಿ ಪ್ರಯಾಣ ಮಾಡುವಾಗ ಕೆಲವೊಂದು ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಕೂಡ ಅವಶ್ಯಕ. ವೈದ್ಯರನ್ನು ಭೇಟಿ ಮಾಡಿ ದೃಢೀಕರಣವನ್ನು ಪಡೆಯುವುದರ ಜೊತೆಗೆ ಔಷಧಿಗಳನ್ನು ಜೊತೆಯಲ್ಲಿ ಇರಿಸಿಕೊಳ್ಳುವುದು.
ಅಷ್ಟೇ ಅಲ್ಲ ಪ್ರಯಾಣದ ವೇಳೆ ಆಹಾರ ಪದಾರ್ಥಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಗರ್ಭಾವಸ್ಥೆಯಲ್ಲಿ ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸುವುದು ಉತ್ತಮ. ಇದರಲ್ಲಿ ಯಾವುದೇ ಕಲಬೆರಕೆ ಇರುವುದಿಲ್ಲ, ಸೈಡ್ ಎಫೆಕ್ಟ್ಸ್ ಕಡಿಮೆ ಇರುತ್ತದೆ.
ಗರ್ಭಾವಸ್ಥೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ ವೈದ್ಯರಿಂದ ಹಾರಾಟಕ್ಕೆ ಸೂಕ್ತವಾದ ಪ್ರಮಾಣಪತ್ರವನ್ನು ತೆಗೆದುಕೊಳ್ಳಿ. ಹೊರದೇಶಕ್ಕೆ ಹೋಗುತ್ತಿದ್ದರೆ ಈ ಪ್ರಮಾಣಪತ್ರವು ಬಹಳ ಮುಖ್ಯವಾಗುತ್ತದೆ.