ಹಲ್ಲು ನೋವಿನ ಸಮಸ್ಯೆ ನಿಮ್ಮನ್ನು ನಿಲ್ಲಲೂ , ಕೂರಲೂ ಬಿಡದೆ ಕಾಡುತ್ತಿದೆಯೇ. ಕೆಲವಷ್ಟು ಮನೆಮದ್ದುಗಳ ಮೂಲಕ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬಹುದು. ಅವುಗಳು ಯಾವುವು ಎಂದಿರಾ?
ಹಲ್ಲು ನೋವು ಕಾಣಿಸಿಕೊಂಡ ತಕ್ಷಣ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ಉಗುರು ಬೆಚ್ಚಗಿನ ನೀರು ಬಳಸಿ. ಇದು ಹಲ್ಲಿನ ನಡುವೆ ಸಿಲುಕಿಕೊಂಡಿರುವ ಆಹಾರದ ಕಣಗಳನ್ನು ತೆಗೆದುಹಾಕಿ ಬಾಯಿಯನ್ನು ಸ್ವಚ್ಛಗೊಳಿಸುತ್ತದೆ.
ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೀರಿನೊಂದಿಗೆ ಬೆರೆಸಿ ಇದರಿಂದ ಬಾಯಿ ತೊಳೆದರೆ ನೋವು ಮತ್ತು ಬಾವು ಕಡಿಮೆಯಾಗುತ್ತದೆ. ಇದು ನೋವುಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಸಾಯಿಸುತ್ತದೆ. ಒಸಡುಗಳ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ಇದನ್ನು ನುಂಗದೆ ಉಗುಳುವುದು ಬಹಳ ಮುಖ್ಯ.
ಪುದೀನಾ ಟೀ ಬ್ಯಾಗ್ ಅನ್ನು ನೋವಿರುವ ಜಾಗಕ್ಕೆ ಇಡುವ ಮೂಲಕ, ಬೆಳ್ಳುಳ್ಳಿ ಜಜ್ಜಿ ಅದನ್ನು ನೋವಿರುವ ಹಲ್ಲಿನೆಡೆ ಇಡುವ ಮೂಲಕ, ಲವಂಗವನ್ನು ಜಜ್ಜಿ ಅಥವಾ ಲವಂಗದ ಎಣ್ಣೆಯನ್ನು ನೋವಿರುವೆಡೆ ಇಟ್ಟುಕೊಳ್ಳುವ ಮೂಲಕ ಹಲ್ಲು ನೋವಿನಿಂದ ಮುಕ್ತಿ ಪಡೆಯಬಹುದು.