ಮಾನವರು ಕಂಡು ಕೇಳರಿಯದ ಹೊಸ ಗ್ರಹದ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತದೆ, ಊಹಾಪೋಹಗಳು ಕೇಳಿಬರುತ್ತದೆ.
ಈಗ ಪುನಃ ಅಂತಹದ್ದೊಂದು ಚರ್ಚೆ ನಡೆದಿದೆ. ವಿಶ್ವದಲ್ಲಿ ಇನ್ನೊಂದು ಗ್ರಹ ಇರಬಹುದು ಎಂದು ಖಗೋಳ ಭೌತಶಾಸ್ತ್ರದ ಕೇಂದ್ರದ ಖಗೋಳಶಾಸ್ತ್ರಜ್ಞರ ಹೊಸ ಅಧ್ಯಯನವು ಪುರಾವೆಗಳನ್ನು ತೋರಿಸಿದೆ ಎಂದು ನ್ಯೂಸ್ ಏಜೆನ್ಸಿಯೊಂದು ವರದಿ ಮಾಡಿದೆ.
ಹೊಸದಾಗಿ ಪತ್ತೆಯಾದ ಗ್ರಹವು ನೆಪ್ಚೂನ್ ಅಥವಾ ಶನಿಯ ಗಾತ್ರದಲ್ಲಿದೆ. ಸಂಶೋಧನೆಗಳ ಪ್ರಕಾರ, ಗ್ರಹವು ಸುಮಾರು ಒಂದರಿಂದ ಮೂರು ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತಿದೆ.
ಗ್ರಹಗಳನ್ನು ಪ್ರೋಟೋಪ್ಲಾನೆಟರಿ ಡಿಸ್ಕ್ಗಳಲ್ಲಿ ರಚಿಸಲಾಗಿದೆ, ಅವು ಮೂಲತಃ ಹೊಸದಾಗಿ ರೂಪುಗೊಂಡ ನಕ್ಷತ್ರಗಳನ್ನು ಸುತ್ತುವರೆದಿರುವ ಗ್ಯಾಸ್ ಮತ್ತು ಧೂಳಿನ ಬ್ಯಾಂಡ್ಗಳಾಗಿವೆ. ವಿಶ್ವವು ನೂರಾರು ಈ ಡಿಸ್ಕ್ಗಳನ್ನು ಹೊಂದಿದ್ದರೂ, ನಿಜವಾದ ಗ್ರಹಗಳ ಜನನ ಮತ್ತು ಬೆಳವಣಿಗೆಯನ್ನು ಗಮನಿಸುವುದು ಸವಾಲಿನ ಕೆಲಸವಾಗಿದೆ ಎಂದು ನಾಸಾ ವಿವರಿಸಿದೆ.
ಸೆಂಟರ್ ಫಾರ್ ಆಸ್ಟ್ರೋಫಿಸಿಕ್ಸ್ ಮತ್ತು ಪ್ರಾಜೆಕ್ಟ್ ಲೀಡರ್ ಫೆಂಗ್ ಲಾಂಗ್ ಪ್ರಕಾರ ಯಂಗ್ ಪ್ಲಾನೆಟ್ಗಳನ್ನು ನೇರವಾಗಿ ಕಂಡುಹಿಡಿಯುವುದು ಹೆಚ್ಚು ಕಠಿಣ. ಇದುವರೆಗೆ ಒಂದು ಅಥವಾ ಎರಡು ಸಂದರ್ಭಗಳಲ್ಲಿ ಮಾತ್ರ ಪರಿಣಾಮಕಾರಿ ಪ್ರಯತ್ನ ನಡೆದಿದೆ ಎಂದು ಉಲ್ಲೇಖಿಸಿದ್ದಾರೆ.
ಸಂಶೋಧನೆಗಾಗಿ ಹೆಚ್ಚಿನ ರೆಸಲ್ಯೂಶನ್ ಡೇಟಾವನ್ನು ಗಮನಿಸಿದ್ದು, ಕೆಲವು ಗುಣಲಕ್ಷಣಗಳನ್ನು ಕಂಡುಕೊಂಡರು. ವಸ್ತುವಿನ ಸ್ಥಾನಗಳು ಮತ್ತು ಗಾತ್ರಗಳು ಗ್ರಹದ ಉಪಸ್ಥಿತಿಗೆ ಹೊಂದಿಕೆಯಾಗುತ್ತವೆ ಎಂದು ಕಂಡುಕೊಂಡಿದ್ದಾರೆ.
ತಾಂತ್ರಿಕ ಮಿತಿಗಳು ಯಾವುದೇ ಸಮಯದಲ್ಲಿ ಯಂಗ್ ಪ್ಲಾನೆಟ್ ಅನ್ನು ನೇರವಾಗಿ ಚಿತ್ರಿಸಲು ಕಷ್ಟವಾಗಿದ್ದರೂ, ಅಧ್ಯಯನಗಳು ಗ್ರಹಗಳ ಅನ್ವೇಷಣೆಗೆ ಹೆಚ್ಚಿನ ಪುರಾವೆಗಳನ್ನು ನೀಡಬಹುದು ಎಂದು ಲಾಂಗ್ ಹೇಳಿದ್ದಾರೆ.