ಬೇಕಾಗುವ ಸಾಮಗ್ರಿ : ಕ್ಯಾರೆಟ್ – 1, ಕತ್ತರಿಸಿದ ಈರುಳ್ಳಿ – 1 , ಎಲೆ ಕೋಸು – 1 ಕಪ್, ಟೊಮೆಟೋ – 1, ಹಸಿ ಮೆಣಸು – 2, ದೊಡ್ಡ ಮೆಣಸಿನ ಕಾಯಿ – 2, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1/2 ಟೇಬಲ್ ಸ್ಪೂನ್, ಕೊತ್ತಂಬರಿ ಸೊಪ್ಪು – ಸ್ವಲ್ಪ , ಟೊಮೆಟೋ ಸಾಸ್ – 2 ಚಮಚ, ಕಾಳುಮೆಣಸಿನ ಪುಡಿ – 1/2 ಚಮಚ, ಅರಿಶಿಣ – ಸ್ವಲ್ಪ, ಗರಂ ಮಸಾಲಾ ಹಾಗೂ ಖಾರದ ಪುಡಿ – 1/2 ಚಮಚ, ಸೌತೇಕಾಯಿ – 1 ಕಪ್ ಹೆಚ್ಚಿದ್ದು, ಚಾಟ್ ಮಸಾಲಾ – ಸ್ವಲ್ಪ, ವೆಜ್ ಮಯೋನೇಸ್ ಸಾಸ್ – 1/2 ಚಮಚ, ಚಪಾತಿ – 2, ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನ ಹಾಕಿಕೊಂಡು ಇದಕ್ಕೆ ಮೆಣಸು , ಈರುಳ್ಳಿ, ಕ್ಯಾಬೇಜ್, ದೊಡ್ಡ ಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಹಾಕಿ ಫ್ರೈ ಮಾಡಿಕೊಳ್ಳಿ. ಒಂದು ನಿಮಿಷವಾದ ಬಳಿಕ ಈರುಳ್ಳಿ ಹಾಗೂ ಕ್ಯಾರೆಟ್ ಹಾಕಿ ಫ್ರೈ ಮಾಡಿ. ಬಳಿಕ ಎಲ್ಲಾ ಮಸಾಲಾ ಪದಾರ್ಥಗಳನ್ನ ಹಾಕಿಕೊಳ್ಳಿ. ಟೊಮ್ಯಾಟೋ ಕೆಚಪ್ ಹಾಕಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸ್ ಸ್ಟೌ ಆಫ್ ಮಾಡಿ.
ಚಪಾತಿಯ ಮಧ್ಯದಲ್ಲಿ ಈ ಪದಾರ್ಥವನ್ನ ಉದ್ದವಾಗಿ ಹಾಕಿ. ಇದರ ಮೇಲೆ ಸೌತೆಕಾಯಿ ಹಾಗೂ ಹಸಿ ಸೌತೆಕಾಯಿ ಹಾಕಿ. ಇದರ ಮೇಲೆ ಸ್ವಲ್ಪ ಚಾಟ್ ಮಸಲಾ, ಟೊಮ್ಯಾಟೋ ಕೆಚಪ್ ಹಾಗೂ ವೆಜ್ ಮಯೋನೇಸ್ ಸಾಸ್ ಹಾಕಿ ಚಪಾತಿಯನ್ನ ರೋಲ್ ಮಾಡಿ. ಈ ರೋಲ್ನ್ನು ಕತ್ತರಿಸಿ ಬಳಿಕ ಸವಿಯಲು ನೀಡಿ.