ಮಗುವಾದ ಬಳಿಕ ದಂಪತಿಗಳ ಮಧ್ಯೆ ಬಿರುಕು ಮೂಡಿದೆಯೇ, ಇದಕ್ಕೆ ಮುಖ್ಯ ಕಾರಣ ಒಬ್ಬರಿಗೊಬ್ಬರು ಸಾಕಷ್ಟು ಸಮಯ ಕೊಡದೆ ಇರುವುದು. ನಿಮ್ಮ ಸಮಸ್ಯೆ ಸರಿಪಡಿಸುವ ಕೆಲವು ಟಿಪ್ಸ್ ಗಳು ಇಲ್ಲಿವೆ ಕೇಳಿ.
ಈಗ ತಾನೇ ತೊದಲು ಮಾತನಾಡುವ, ಅಮ್ಮ ಎನ್ನುವ ಮಗುವನ್ನು ಕಂಡರೆ ತಾಯಿಗೆ ಅತೀವ ಅಕ್ಕರೆ, ಕಾಳಜಿ. ಅದರ ಆರೈಕೆಯಲ್ಲೇ ಹೆಚ್ಚಿನ ಸಮಯ ಕಳೆದುಹೋಗುವುದು ಆಕೆಯ ಅರಿವಿಗೂ ಬರುತ್ತಿಲ್ಲ. ಹಾಗಾಗಿ ಸಹಜವಾಗಿ ಪತಿ ನಿರ್ಲಕ್ಷಕ್ಕೆ ಒಳಗಾಗುತ್ತಾನೆ.
ಪ್ರತಿಯೊಂದು ವಿಷಯದಲ್ಲೂ ಪತಿ ಈಕೆ ಹಿಂದೆ ಈಗಿರಲಿಲ್ಲ ಎಂದು ಹೋಲಿಕೆ ಮಾಡಲು ಕಲಿಯುತ್ತಾನೆ. ಆಗ ಪತ್ನಿಗೆ ಉಭಯಸಂಕಟ. ಅತ್ತ ಮಗುವಿನತ್ತ ಗಮನ ಹರಿಸುವುದೋ ಪತಿಯನ್ನು ವಿಚಾರಿಸುವುದೋ ಎಂಬ ಗೊಂದಲದಲ್ಲಿ ಜಗಳಗಳಾಗುತ್ತವೆ.
ಅದರ ನಿವಾರಣೆಗೆ ಪರಸ್ಪರ ಒಬ್ಬರಿಗೊಬ್ಬರು ಸಮಯ ಕೊಡುವುದನ್ನು ಕಲಿತುಕೊಳ್ಳಿ. ಕೆಲಸದಿಂದ ಮನೆಗೆ ಮರಳಿದಾಕ್ಷಣ ಅಥವಾ ರಾತ್ರಿ ಮಲಗುವ ಮುನ್ನ ಆ ದಿನದ ಆಗುಹೋಗುಗಳ ತಪ್ಪು ಸರಿಗಳ ಮಾತನಾಡಿ. ಅಂದಂದಿನ ವಿಷಯವನ್ನು ಅಂದಂದೇ ಮಾತನಾಡಿ ಮುಗಿಸಿ. ಸಮಸ್ಯೆಗಳಿದ್ದರೆ ಅದನ್ನು ಒಪ್ಪಿ, ಪರಿಹರಿಸಿಕೊಳ್ಳಿ. ಅಲ್ಲಿಗೆ ನಿಮ್ಮ ಸಂಸಾರ ಸುಖಮಯ.